ಜನ ಎರಡೂ ಪಕ್ಷಗಳಿಂದ ರೋಸಿ ಹೋಗಿದ್ದಾರೆ : ರಾಹುಲ್ ಬಂದು ಹೋದ ಮೇಲೆ ನಮ್ಮ ಕಡೆಯಿಂದ ದೊಡ್ಡ ಸಭೆ

First Published 16, Mar 2018, 5:11 PM IST
HDD Lashes out National party
Highlights

ಎನ್‌ಡಿಎ ಮೈತ್ರಿಕೂಟದಿಂದ ಟಿಡಿಪಿ ಹೊರಬಂದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ,  ಆಂಧ್ರ ವಿಭಜನೆಯಾದಾಗ ವಿಶೇಷ ಪ್ಯಾಕೇಜ್ ಕೊಡುವು ದಾಗಿ ಕೇಂದ್ರ ಹೇಳಿತ್ತು. ದರೆ ಈವರೆಗೂ ಪ್ಯಾಕೇಜ್ ನೀಡಿಲ್ಲ. ಪ್ಯಾಕೇಜ್ ಬಗ್ಗೆ ಪ್ರಧಾನಿ ಅವರು ಯೂ ಟರ್ನ್ ತೆಗೆದು ಕೊಂಡರು.

ಹಾಸನ(ಮಾ.16): ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರು ಎರಡೂ ರಾಷ್ಟ್ರೀಯ ಪಕ್ಷಗಳಿಂದ ರೋಸಿ ಹೋಗಿದ್ದಾರೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋಟ್ ಬ್ಯಾನ್, ಜಿಎಸ್ಟಿ ಕಪ್ಪುಹಣ ಬಡವರಿಗೆ ಹಂಚಿಕೆ ಭರವಸೆ ಹಾಗೂ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಮೋದಿ ಅವರ ಜನಪ್ರಿಯತೆ ಕುಗ್ಗಿಸುತ್ತಿರುವುದು ಸತ್ಯ. ಅದೇ ಕಾರಣಕ್ಕೆ ಕೇಂದ್ರದಲ್ಲಿ ಕೆಲವು  ಬೆಳವಣಿಗೆಗಳು ನಡೆಯುತ್ತಿವೆ' ಎಂದು ತಿಳಿಸಿದರು.

ಎನ್‌ಡಿಎ ಮೈತ್ರಿಕೂಟದಿಂದ ಟಿಡಿಪಿ ಹೊರಬಂದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ,  ಆಂಧ್ರ ವಿಭಜನೆಯಾದಾಗ ವಿಶೇಷ ಪ್ಯಾಕೇಜ್ ಕೊಡುವು ದಾಗಿ ಕೇಂದ್ರ ಹೇಳಿತ್ತು. ಆದರೆ ಈವರೆಗೂ ಪ್ಯಾಕೇಜ್ ನೀಡಿಲ್ಲ. ಪ್ಯಾಕೇಜ್ ಬಗ್ಗೆ ಪ್ರಧಾನಿ ಅವರು ಯೂ ಟರ್ನ್ ತೆಗೆದು ಕೊಂಡರು. ಕೇಂದ್ರದ ಈ ನಡೆ ಇವತ್ತಿನ ಹೊಸ ಬೆಳವಣಿಗೆಗೆ ಕಾರಣ ಇರಬಹುದು. ಕಳೆದ ಮೂರು ವಾರಗಳ ಬೆಳವಣಿಗೆಗೆ ಇಂದು ತೆರೆ ಬಿದ್ದಿದೆ. ಚಂದ್ರಬಾಬುನಾಯ್ಡುಗೆ ನನ್ನ ಬೆಂಬಲದ ಬಗ್ಗೆ ಕಾದು ನೋಡಿ ಎಂದು  ಮಾಜಿ ಪ್ರಧಾನಿ ಹೇಳಿದ್ದಾರೆ.

ಕಾಂಗ್ರೆಸ್ ವಿರುದ್ಧವೂ ಕೋಪ

ಮಾಜಿ ಸಿಎಂ ವೀರಪ್ಪಮೊಯ್ಲಿ ಪರ್ಸಂಟೇಜ್ ರಾಜಕೀಯ ಆರೋಪ ಸತ್ಯ ಎಂದ ಗೌಡರು, ಅದರಲ್ಲಿ ಯಾವುದೇ ಅನುಮಾನ ಇಲ್ಲ. ಇದು ಒಂದಂಶ ಅಷ್ಟೆ, ಈ ರೀತಿ ಚಟುವಟಿಕೆ ಸಾಕಷ್ಟು ನಡೆಯುತ್ತಿವೆ. ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮೊಯ್ಲಿಗಿಂತ ನಾನು‌ ಬೇರೆ ಹೇಳಬೇಕೆ? ಜಿಲ್ಲೆಗೆ 21 ಕ್ಕೆ ರಾಹುಲ್ ಗಾಂಧಿ ಬಂದು ಹೋಗಲಿ, ಆ ನಂತರ ನಾವೂ ದೊಡ್ಡ ಸಭೆ ಮಾಡುತ್ತೇವೆ ಎಂದು ಹೇಳಿದರು.

ಮುಂದಿನ ಕಾವೇರಿ ಕೊಳ್ಳದ ಸಂಸದರ ಸಭೆಯನ್ನು ಮುಂದೆ ಕರೆದರೂ ಭಾಗಿಯಾಗುವೆ. ಕಾವೇರಿ ವಿಚಾರದಲ್ಲಿ ನನ್ನ ನಿರ್ಧಾರ ಅಚಲ, ಯಾವುದೇ ಮುಜುಗರ ಇಲ್ಲ. ನಿರ್ವಹಣಾ ಮಂಡಳಿ ರಚನೆ ಬಗ್ಗೆ ನಾನು ಈಗಾಗಲೇ ಕೇಂದ್ರದ ಹಲವರಿಗೆ ಪತ್ರ ಬರೆದಿದ್ದೇನೆ.ಚುನಾವಣೆ ಹೊಸ್ತಿಲಲ್ಲಿ ಸಾವಿರಾರು ಕೋಟಿ‌ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿದ್ರೆ ಜನ ನಂಬ್ತಾರಾ? ಜನರಿಗೆ ರಾಜಕೀಯ ಪ್ರಭುತ್ವ ಇಲ್ಲವೇ?  ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ಖೇಣಿ ಸಾಕಷ್ಟು ಅಕ್ರಮ ಮಾಡಿದ್ದಾರೆ. 30 ಸಾವಿರ ಕೋಟಿ ವಂಚನೆ ಮಾಡಿದ್ದಾರೆ. ಅಂಥವರನ್ನು ಪಕ್ಷಕ್ಕೆ ಸೇರಿಸಿಕೊಂಡು ‌ನಮ್ಮದು ಭ್ರಷ್ಟರಹಿತ ಸರಕಾರ ಅಂದ್ರೆ ಜನ ಒಪ್ಪುತ್ತಾರಾ? ನೈಸ್ ಯೋಜನೆಯಿಂದ ತೊಂದರೆಗೀಡಾಗಿರುವ ರೈತರ ಸೇರಿಸಿ ಶೀಘ್ರ ರಾಜಭವನ ಚಲೋ ಮಾಡುವೆ,  ರಾಜ್ಯ ಸರಕಾರದ‌ ವಿರುದ್ಧ ಮತ್ತೆ ಗೌಡರು ತೊಡೆ ತಟ್ಟಿದರು.

loader