ನಾನು ಸದ್ಯಕ್ಕೆ ಯಾವ ಸಿಗ್ನಲ್ ಕೊಟ್ಟಿಲ್ಲ, ತೀರ್ಮಾನ ಮಾಡಲು ಜನ ಇದ್ದಾರೆ.

ಬೆಂಗಳೂರು(ನ.08): ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರ ಹೇಳಿಕೆ ಗೊಂದಲ ಮೂಡಿಸಿದೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸದ್ಯಕ್ಕೆ ಯಾವ ಸಿಗ್ನಲ್ ಕೊಟ್ಟಿಲ್ಲ, ತೀರ್ಮಾನ ಮಾಡಲು ಜನ ಇದ್ದಾರೆ. ನಾನು ಪ್ರಧಾನಿ ಆಗುತ್ತೇನೆ ಅಂದುಕೊಂಡಿರಲಿಲ್ಲ ಹಾಗೇಯೇ ನಿಖಿಲ್ - ಪ್ರಜ್ವಲ್ ಏನಾಗಬೇಕು ಅನ್ನೋದನ್ನು ಜನ ತೀರ್ಮಾನಿಸ್ತಾರೆ. ಮೊನ್ನೆ ಹಾಸನದ ಹರದನಹಳ್ಳಿಯಲ್ಲಿ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಅವರ ಪತ್ನಿ ಭಾವನಿ ರೇವಣ್ಣ ಅವರು ಪ್ರಜ್ವಲ್ ಸ್ಪರ್ಧೆಗೆ ಗೌಡರು ಗ್ರೀನ್​ ಸಿಗ್ನಲ್ ಕೊಟ್ಟಿದ್ದಾರೆ ಎಂದು ತಿಳಿಸಿದ್ದರು. ಆದರೆ ದೇವೇಗೌಡರು ಇಂದು ನೀಡಿರುವ ಹೇಳಿಕೆ ಗೊಂದಲ ಮೂಡಿಸಿದೆ. ಈ ಹೇಳಿಕೆ ಪರೋಕ್ಷವಾಗಿ ಇಬ್ಬರನ್ನು ರಾಜಕೀಯದಲ್ಲಿ ಬೆಳಸುವ ಸೂಚನೆ ನೀಡಿದ್ದಾರೆ.

ಚೆಲುವರಾಯ ಸ್ವಾಮಿ ಹೇಳಿಕೆಗೆ ಟಾಂಗ್ ನೀಡಿದ ಗೌಡರು

ಕನಕಪುರ'ದಲ್ಲಿ ಈಗಲೂ ನಾನು ಹೋದರೂ ಜನ ಸೇರಿಸುವ ಶಕ್ತಿ ಇದೆ. ಕೆಲವು ರಾಜಕೀಯ ಭಿನ್ನಾಭಿಪ್ರಾಯಗಳು ಇದ್ದವು. ಅವೆಲ್ಲವನ್ನೂ ಇವತ್ತಿನ ಸಭೆಯಲ್ಲಿ ಬಗೆಹರಿಸಿದ್ದೇವೆ. ಮುಂದಿನ ಚುನಾವಣೆಯಲ್ಲಿ ಕನಕಪುರದಿಂದ ಒಂದು ಸ್ಥಾನ ಗೆಲ್ಲಿಸಿಕೊಡುವ ವಿಶ್ವಾಸ ವನ್ನು ಕಾರ್ಯಕರ್ತರು ನೀಡಿದ್ದಾರೆ' ಎಂದು ಚೆಲುವರಾಯ ಸ್ವಾಮಿ ಹೇಳಿಕೆಗೆ ದೇವೇಗೌಡರು ಟಾಂಗ್ ನೀಡಿದರು.