ಕುಡಿಯುವ ನೀರಿನ ಯೋಜನೆ‌ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಮತ್ತು ದೇವೇಗೌಡ ಅವರು ರಾಜಕೀಯ ವೈಷಮ್ಯ ಮರೆತು ಬೆರೆತರು. ಅಷ್ಟೇ ಅಲ್ಲದೇ ಈ ವೇಳೆ ಸಿದ್ದರಾಮಯ್ಯ ಅವರೊಂದಿಗೆ ಒಟ್ಟಿಗೆ ಕೆಲಸ ಮಾಡಿದ ದಿನಗಳನ್ನು ದೇವೇಗೌಡರು ನೆನಪಿಸಿಕೊಂಡರು.
ಹಾಸನ (ಫೆ.19): ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಸಿಎಂ ಸಿದ್ದರಾಮಯ್ಯ ಬಹುದಿನಗಳ ಬಳಿಕ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
ದೇವೇಗೌಡರ ತವರಲ್ಲೇ ಉಭಯ ನಾಯಕರು ಒಂದೇ ವೇದಿಕೆ ಹಂಚಿಕೊಂಡಿದ್ದಾರೆ.
ಕುಡಿಯುವ ನೀರಿನ ಯೋಜನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಮತ್ತು ದೇವೇಗೌಡ ಅವರು ರಾಜಕೀಯ ವೈಷಮ್ಯ ಮರೆತು ಬೆರೆತರು. ಅಷ್ಟೇ ಅಲ್ಲದೇ ಈ ವೇಳೆ ಸಿದ್ದರಾಮಯ್ಯ ಅವರೊಂದಿಗೆ ಒಟ್ಟಿಗೆ ಕೆಲಸ ಮಾಡಿದ ದಿನಗಳನ್ನು ದೇವೇಗೌಡರು ನೆನಪಿಸಿಕೊಂಡರು.
ಕಾವೇರಿ ತೀರ್ಪು ಏನಾಗುವುದೋ ಯಾರಿಗೂ ಗೊತ್ತಿಲ್ಲ, ವ್ಯತಿರಿಕ್ತವಾದರೆ ರಾಜ್ಯಕ್ಕೆ ದೊಡ್ಡ ಪೆಟ್ಟು. ಹಾಗಾಗಿ ರಾಜ್ಯ ಮತ್ತು ಅಭಿವೃದ್ದಿ ವಿಷಯದಲ್ಲಿ ರಾಜಕೀಯ ಬೇಡ ಎಂದರು.
