ಇಂದು ಜಮೀರ್ ಮಾತಿಗೆ ತಿರುಗೇಟು ನೀಡಿದ ಜೆಡಿಎಸ್ ನಾಯಕ ರೇವಣ್ಣ, ತಾಕತ್ತಿದ್ದರೆ, ನೈತಿಕತೆ ಇದ್ದರೆ ನಾಳೆಯೇ 7 ಜನರು ರಾಜೀನಾಮೆ ನೀಡಲಿ.

ಬೆಂಗಳೂರು(ಜು.24): ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್​ ಗೆಲ್ಲುವುದಿರಲಿ, ಠೇವಣಿ ಕೂಡ ಉಳಿಸಿಕೊಳ್ಳುವುದಿಲ್ಲ. ಅಪ್ಪಿ ತಪ್ಪಿ ಜೆಡಿಎಸ್​ ಗೆದ್ದರೆ ನಾನು ಮಾಧ್ಯಮದ ಮುಂದೆ ತಲೆ ಕತ್ತರಿಸಿಕೊಳ್ಳುತ್ತೇಬೆಂದು ಮೊನ್ನೆ ಜೆಡಿಎಸ್​ ಪಾಳಯಕ್ಕೆ ಬಂಡಾಯ ಶಾಸಕ ಜಮೀರ್ ಸವಾಲೆಸೆದಿದ್ದರು. ಇಂದು ಜಮೀರ್ ಮಾತಿಗೆ ತಿರುಗೇಟು ನೀಡಿದ ಜೆಡಿಎಸ್ ನಾಯಕ ರೇವಣ್ಣ, ತಾಕತ್ತಿದ್ದರೆ, ನೈತಿಕತೆ ಇದ್ದರೆ ನಾಳೆಯೇ 7 ಜನರು ರಾಜೀನಾಮೆ ನೀಡಲಿ. ನಮಗೆ ಜಮೀರ್ ಅಂತ ಚಂಗಲು ಡ್ರೈವರ್ ಬೇಕಿಲ್ಲ ಅಂತಾ ತಿರುಗೇಟು ನೀಡಿದ್ದಾರೆ.