ಬಿಎಸ್ ವೈಗೆ ಎಚ್.ಡಿ ರೇವಣ್ಣ ಬಹಿರಂಗ ಸವಾಲು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Aug 2018, 4:42 PM IST
HD Revanna Open Challenge To BS Yeddyurappa
Highlights

ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಬಿಎಸ್ ಯಡಿಯೂರಪ್ಪ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ಅಲ್ಲದೇ ನಮ್ಮ ಕೆಲಸವನ್ನು ನೋಡಿ ಸಹಿಸಲಾಗದೇ ಬಿಜೆಪಿ ಮುಖಂಡರು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದಾರೆ. 

ಹಾಸನ :  ಹಾಸನದಲ್ಲಿ ನಡೆಯುವ 35 ವಾರ್ಡ್ ಗಳಲ್ಲಿಯೂ ಕೂಡ ಜೆಡಿಎಸ್ ಸ್ಪರ್ಧೆ ಮಾಡಲಿದೆ. ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ರೀತಿಯ ಧಕ್ಕೆ ಬಾರದಂತೆ ಚುನಾವಣೆ ಎದುರಿಸಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ. 

ಜನ ಎಂದಿಗೂ ಕೂಡ ಪಕ್ಷವನ್ನು ನೋಡುವುದಿಲ್ಲ. ಮಾಡುವ ಕೆಲಸವನ್ನು ನೋಡುತ್ತಾರೆ ಎಂದಿದ್ದಾರೆ. ಅಲ್ಲದೇ ಮೈತ್ರಿಯ ಬಗ್ಗೆ  ಎರಡೂ  ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದಿದ್ದಾರೆ.  

ಅಲ್ಲದೇ ಇದೇ ವೇಳೆ ಬಿಜೆಪಿ ಮುಖಂಡ ಬಿಎಸ್ ವೈ ಅವರಿಗೂ ಕೂಡ ಸವಾಲೆಸೆದಿದ್ದು,  ನಾನು ಯಾವುದಾದರೂ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದರೆ ಬಹಿರಂಗ ಪಡಿಸಲಿ ಎಂದು ಹೇಳಿದ್ದಾರೆ.  

ಅಲ್ಲದೇ ಜೆಡಿಎಸ್‌ ನಲ್ಲಿ‌ ಮೂವರು ಸಿಎಂ ಇದ್ದಾರೆಂಬ ಬಿಜೆಪಿ ಟ್ವೀಟ್ ಗೂ ಕೂಡ ಟೀಕೆ ಮಾಡಿದ್ದು, ಹೊಟ್ಟೆ ತುಂಬಿದವರು ಟ್ವೀಟ್ ಮಾಡ್ತಾರೆ. ಅವರು ಟ್ವೀಟ್ ಮಾಡುತ್ತಿರಲಿ‌, ನಾವು ಜನರ ಕೆಲಸ ಮಾಡುತ್ತೇವೆ. ಕುಮಾರಸ್ವಾಮಿ ‌ಮಾಡುತ್ತಿರೊ ಕೆಲಸದಿಂದ ಅವರಿಗೆ ಹೊಟ್ಟೆ ಉರಿ ಶುರುವಾಗಿದೆ ಎಂದು ಹೇಳಿದ್ದಾರೆ. 
 

loader