ಬೆಂಗಳೂರು [ಜು.11] :  ರಾಜ್ಯ ರಾಜಕೀಯದಲ್ಲಿ  ಹೈ ಡ್ರಾಮಾ ನಡೆಯುತ್ತಿದ್ದು, ಶಾಸಕರು ಸಚಿವರ ರಾಜೀನಾಮೆ ಬಳಿಕ ಇದೀಗ ಸಿಎಂ ರಾಜೀನಾಮೆ ವಿಚಾರ ಚರ್ಚೆಯಾಗುತ್ತಿದೆ. ದಿನದಿನಕ್ಕೂ ಕೂಡ ಹೊಸ ತಿರುವುಗಳೋಂದಿಗೆ ರಾಜಕಾರಣ ಸಾಗುತ್ತಿದೆ. 

ಆದರೆ ಸಿಎಂ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸಿಎಂ ರಾಜೀನಾಮೆ ನೀಡುವಂತಹ ಸ್ಥಿತಿ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಕರ್ನಾಟಕ ರಾಜಕೀಯ ಪ್ರಹಸನದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ

2008 -09ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಏನಾಗಿತ್ತು. ಆಗಲೂ ಕೂಡ 18 ಮಂದಿ ಬಂಡಾಯ ಎದ್ದಿದ್ದರು. ಆಗ ಯಡಿಯೂರಪ್ಪ ಏನು ಮಾಡಿದರು ಎಂದು ಪ್ರಶ್ನೆ ಮಾಡಿದ್ದಾರೆ. 

ಅಂದು 16 ಮಂದಿಯನ್ನು ಅನರ್ಹಗೊಳಿಸಿ ಬಿಜೆಪಿ ಸರ್ಕಾರ ಮುಂದುವರಿಸಿತ್ತು. ಹಾಗೆ ಅದೇ ಕಾನೂನು, ಅದೇ ಸ್ಪೀಕರ್ ನಿರ್ಣಯ ಈಗಲೂ ಅನ್ವಯಿಸುದಿಲ್ಲವೇ ಎಂದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ರಾಜೀನಾಮೆ ವಿಚಾರವನ್ನು ತಳ್ಳಿ ಹಾಕಿದರು.