ಬೆಂಗಳೂರು[ಜು.15]: ಶುಕ್ರವಾರದಂದು ಸಿಎಂ ಕುಮಾರಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವುದಾಗಿ ಘೋಷಿಸಿದ್ದರು. ಇದು ಬಿಜೆಪಿ ಹಾಗೂ ಅತೃಪ್ತ ಶಾಸಕರಲ್ಲಿ ಆತಂಕ ಮೂಡಿಸಿತ್ತು. ಆದರೆ ಇಂತಹುದ್ದೊಂದು ಘೋಷಣೆ ಮಾಡಿದ್ದ ಸಿಎಂ ಕುಮಾರಸ್ವಾಮಿ ಸೋಮವಾರ ಬೆಳಗ್ಗಿನವರೆಗೂ ದಿನಾಂಕ ಘೋಷಿಸಿದಿರುವುದು ಹಾಗೂ ವಿಶ್ವಾಸಮತಯಾಚಿಸುವ ಬಗ್ಗೆ ಸ್ಪೀಕರ್ ಗೆ ಅಧಿಕೃತ ಪತ್ರ ನೀಡದೇ ಮೌನ ವಹಿಸಿದ್ದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಆದರೀಗ ಎಲ್ಲಾ ವದಂತಿಗಳಿಗೆ ತೆರೆ ಎಳೆದಿರುವ ಸಿಎಂ ಕುಮಾರಸ್ವಾಮಿ ವಿಶ್ವಾಸ ಮತಯಾಚನೆಗೆ ಕೊನೆಗೂ ಅಧಿಕೃತ ಪತ್ರ ನೀಡಿದ್ದಾರೆ.

ವಿಶ್ವಾಸಮತ ಯಾಚನೆಗೆ ರೆಡಿ ಇಲ್ವಾ ಸಿಎಂ ಕುಮಾರಸ್ವಾಮಿ?

ಹೌದಿ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುವುದಾಗಿ ಘೋಷಿಸಿದ್ದರು. ಆದರೆ ವಿಧಾನಸೌಧದಿಂದ ಹೊರ ಬಂದ ಬಳಿಕ ಈ ವಿಚಾರವಾಗಿ ದೀರ್ಘ ಮೌನ ವಹಿಸಿದ್ದರು. ಇದರಿಂದಾಗಿ ಕುಮಾರಸ್ವಾಮಿ ನಿಜ್ಕಕೂ ವಿಶ್ವಾಸಮತ ಯಾಚಿಸ್ತಾರಾ? ಅಲ್ವಾ? ವಿಶ್ವಾಸಮತ ಯಾಚಿಸಿದರೂ ಯಾವಾಗ? ಎಂಬ ಪ್ರಶ್ನೆಗಳು ಗರಿಗೆದರಿದ್ದವು. ಹೀಗಿರುವಾಗಲೇ ಸ್ಪೀಕರ್ ಅಧ್ಯಕ್ಷತೆಯಲ್ಲಿ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಸರ್ಕಾರ ವಿಶ್ವಾಸಮತ ಸಾಬೀತಿಗೆ ದಿನಾಂಕ ನಿಗದಿಪಡಿಸಿ ಎಂದು ಬಿಜೆಪಿ ಪಟ್ಟು ಹಿಡಿದಿತ್ತು. ಇದು ಸಾಧ್ಯವಾಗದಿದ್ದರೆ ಅವಿಶ್ವಾಸ ನಿರ್ಣಯ ಮಂಡನೆಗೆ ನಮಗೆ ಅವಕಾಶ ಕೊಡಿ ಎಂದು ವಾದಿಸಿತ್ತು. 

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇವೆಲ್ಲದರ ಬೆನ್ನಲ್ಲೇ ಸಿಎಂ ವಿಶ್ವಾಸ ಮತಯಾಚನೆಗೆ ಕೊನೆಗೂ ಅಧಿಕೃತ ಪತ್ರ ನೀಡಿದ್ದಾರೆ. ಕಳೆದ ಶುಕ್ರವಾರ ಮೌಖಿಕವಾಗಿ ಸದನದಲ್ಲಿ ಘೋಷಿಸಿದ್ದ ಸಿಎಂ ವಿಶ್ವಾಸಮತ ಯಾಚನೆಗೆ ಇದೀಗ ಲಿಖಿತವಾಗಿ ಮನವಿ ಸಲ್ಲಿಸಿ, ಸಮಯ ನಿಗದಿ ಮಾಡುವಂತೆ ಸ್ಪೀಕರ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಮುಂದೆ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಯಲ್ಲಿ ಪಾಸಾಗ್ತಾರಾ ಅಥವಾ ಅವಿಶ್ವಾಸ ನಿರ್ಣಯ ಮಂಡನೆಯಾಗುತ್ತಾ? ಕಾದು ನೋಡಬೇಕು.