ಬೆಂಗಳೂರು[ಜು.15]: ಕಳೆದೆರಡು ವಾರದಿಂದ ನಡೆಯುತ್ತಿರುವ ರಾಜ್ಯ ರಾಜಕೀಯ ಹೈಡ್ರಾಮಾ ಇಂದು ಸೋಮವಾರವೂ ಮುಂದುವರೆದಿದೆ. ಒಂದೆಡೆ ಸ್ಪೀಕರ್ ರಾಜೀನಾಮೆ ಅಂಗೀಕರಿಸಲು ತಡ ಮಾಡುತ್ತಿದ್ದಾರೆ ಎಂದು ಅತೃಪ್ತ ಶಾಸಕರು ಸುಪ್ರೀಂ ಮೆಟ್ಟಿಲೇರಿದ್ದರೆ, ಇತ್ತ ಸಿಎಂ ಕುಮಾರಸ್ವಾಮಿ ತಾನು ವಿಶ್ವಾಸಮತ ಯಾಚಿಸುವುದಾಗಿ ಹೊಸ ಅಸ್ತ್ರ ಎಸೆದಿದ್ದರು. ಆದರೀಗ ಹೊಸ ಅಸ್ತ್ರ ಪ್ರಯೋಗಿಸಿದ ಕುಮಾರಸ್ವಾಮಿ ಹೊಸ ತಂತ್ರ ಹೂಡಿದ್ದಾರಾ? ಎಂಬ ಅನುಮಾನ ವ್ಯಕ್ತವಾಗಿದೆ.

ಹೌದು ಶುಕ್ರವಾರ ಸುಪ್ರೀಂ ಕೋರ್ಟ್ ತನ್ನ ತೀರ್ಪು ಮುಂದೂಡಿದ ಬೆನ್ನಲ್ಲೇ ಅಚ್ಚರಿಯ ಬೆಳವಣಿಗೆಯೊಂದು ನಡೆದಿತ್ತು. ವಿಧಾನಸೌಧ್ಕಕೆ ಆಗಮಿಸಿದ್ದ ಕುಮಾರಸ್ವಾಮಿ ತಾವು ವಿಶ್ವಾಸಮತ ಯಾಚಿಸುತ್ತೇನೆ ಎನ್ನುವ ಮೂಲಕ ತಮ್ಮ ದಾಳ ಎಸೆದಿದ್ದರು. ಕುಮಾರಸ್ವಾಮಿಯವರ ಈ ಅಸ್ತ್ರ ಅತೃಪ್ತ ಶಾಸಕರು ಸೇರಿದಂತೆ ವಿಪಕ್ಷಕ್ಕೆ ಶಾಕ್ ಕೊಟ್ಟಿತ್ತು. ಆದರೀಗ ಈ ದಾಳದ ಹಿಂದೆ ಬೇರೆಯೃ ತಂತ್ರವಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶುಕ್ರವಾರ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆಗೆ ರೆಡಿ ಎಂದಿದ್ದ ಸಿಎಂ ಈ ಕುರಿತಾಗಿ ಸ್ಪೀಕರ್ಗೆ ಅಧಿಕೃತ ಪತ್ರ ನೀಡಬೇಕಿತ್ತು. ಆದರೆ ಸಿಎಂ ಕುಮಾರಸ್ವಾಮಿ ವಿಧಾನಸಭೆ ಕಾರ್ಯದರ್ಶಿಗೆ ಇನ್ನೂ ಅಧಿಕೃತ ಲಿಖಿತ ಕೊಟ್ಟಿಲ್ಲ. ಹೀಗಾಗಿ ಸಿಎಂ ವಿಶ್ವಾಸಮತಯಾಚನೆ ಕೋರುತ್ತಾರೋ ? ಇಲ್ಲವೋ? ಅಥವಾ ವಿಶ್ವಾಸಮತಯಾಚನೆ ಹೇಳಿಕೆ ನಂತರ ನಿಲುವು ಬದಲಿಸಿದ್ರಾ ಎಂಬ ಪ್ರಶ್ನೆಗಳ ಸರಮಾಲೆ ಎದ್ದಿದೆ.