ಮೈತ್ರಿಗಾಗಿ ಅರ್ಜಿ ಹಾಕಿಲ್ಲ : ಎಚ್’ಡಿಕೆ ಟಾಂಗ್..!

First Published 7, Mar 2018, 8:47 AM IST
HD Kumaraswamy Slams CM Siddaramaiah
Highlights

ಜೆಡಿಎಸ್‌ ಬಗ್ಗೆ ಲಘುವಾಗಿ ಮಾತನಾಡಿದರೆ ದೇಶದ ಒಂದು ಕಡೆ ಇರುವ ನೆಲೆಯೂ ಸರ್ವನಾಶ ಆದೀತು ಎಂದು ಕಾಂಗ್ರೆಸ್‌ಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು: ಜೆಡಿಎಸ್‌ ಬಗ್ಗೆ ಲಘುವಾಗಿ ಮಾತನಾಡಿದರೆ ದೇಶದ ಒಂದು ಕಡೆ ಇರುವ ನೆಲೆಯೂ ಸರ್ವನಾಶ ಆದೀತು ಎಂದು ಕಾಂಗ್ರೆಸ್‌ಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್‌ ಜತೆ ಹೊಂದಾಣಿಕೆಯ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಈ ರೀತಿ ತಿರುಗೇಟು ನೀಡಿದ್ದಾರೆ. ಹೊಂದಾಣಿಕೆ ಮಾಡಿ ಎಂದು ನಾವೇನು ಅರ್ಜಿ ಹಾಕಿದ್ದೇವೆಯೇ? ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ನಮ್ಮ ಬಳಿ ಅರ್ಜಿ ಹಾಕಿ ಬಂದವರು ನೀವು. ನಾವು ನಿಮ್ಮ ಮನೆ ಬಾಗಿಲಿಗೆ ಎಂದೂ ಬಂದಿಲ್ಲ.

ಆದರೆ ನಿಮಗೆ ಕಷ್ಟಆದಾಗ ನಮ್ಮನೆ ಬಾಗಿಲಿಗೆ ಬಂದಿದ್ದೀರಿ. ಚುನಾವಣೆ ಎದುರಿಸುವ ಸಂಪೂರ್ಣ ಶಕ್ತಿ ಜೆಡಿಎಸ್‌ಗೆ ಇದೆ. ಸಿಎಂಗೆ ಅಧಿಕಾರದ ಮದ ಏರಿದೆ. ಬನ್ನಿ ಚುನಾವಣೆಗೆ, ನಾವು ಏನೂಂತ ತೋರಿಸ್ತೀವಿ ಎಂದು ಸವಾಲು ಹಾಕಿದರು.

loader