ಕುಮಾರಸ್ವಾಮಿ ಬಾಯಿಂದ ಮತ್ತೆ ನಿವೃತ್ತಿಯ ಮಾತು..!

ಅದ್ಯಾಕೋ ಗೊತ್ತಿಲ್ಲ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಪದೇ ಪದೇ ರಾಜಕೀಯ ನಿವೃತ್ತಿ ಮಾತುಗಳನ್ನಾಡುತ್ತಿದ್ದಾರೆ. 
ಕುಮಾರಸ್ವಾಮಿ ಬಾಯಲ್ಲಿ ಮತ್ತೆ ರಾಜಕೀಯ ನಿವೃತ್ತಿಯ ಮಾತು..!

HD Kumaraswamy once again spoke political retirement In Channapatna

ರಾಮನಗರ(ಆ.05): ಮೊನ್ನೇ ಅಷ್ಟೇ ಹಾಸನದಲ್ಲಿ ರಾಜಕೀಯ ನಿವೃತ್ತಿ ಮಾತುಗಳನ್ನಾಡಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಅದೇ ಮಾತುಗಳನ್ನು ಪುನರುಚ್ಚರಿಸಿದ್ದಾರೆ.

ಇಂದು (ಸೋಮವಾರ) ರಾಮನಗರ ಜಿಲ್ಲೆಯ  ತಮ್ಮ ಸ್ವಕ್ಷೇತ್ರ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದು, ತಮ್ಮ ಕಾರ್ಯಕರ್ತರ ಜತೆ ಸ್ವಲ್ಪ ಹೊತ್ತು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಮತ್ತೆ ರಾಜಕೀಯ ನಿವೃತ್ತಿಯ ಮಾತುಗಳನ್ನಾಡಿದ್ದಾರೆ.

ಕುಮಾರಸ್ವಾಮಿ ಬಾಯಲ್ಲಿ ರಾಜಕೀಯ ನಿವೃತ್ತಿ ಮಾತು: ಏನಂದ್ರು ಕೇಳಿ..?

ನಮ್ಮಿಂದ ಬೆಳೆದವರೇ ಈಗ ನಮಗೆ ಮೋಸ ಮಾಡಿದ್ದಾರೆ. ನಮ್ಮ ಮೇಲೆ ಯಾವುದೇ ಅಪಪ್ರಚಾರ ಬಂದರು ನಂಬಬೇಡಿ
ನನಗೆ ಸಿಎಂ ಸ್ಥಾನ ಬೇಕಿಲ್ಲ, ನಿಮ್ಮೆಲ್ಲರ ಪ್ರೀತಿ ಬೇಕು ಅಷ್ಟೇ. ಮಾಧ್ಯಮದಲ್ಲಿ ಬರುವ ವರದಿಗಳನ್ನ ನೋಡಿ ನೀವು ತೀರ್ಮಾನ ಮಾಡಿದರೆ ನಿಮ್ಮ ಕಾಲಿಗೆ ನಮಸ್ಕರಿಸಿ ರಾಜಕೀಯದಿಂದ ದೂರ ಹೋಗುತ್ತೇನೆ ಎಂದು ಹೇಳಿದರು.

ಮಾಧ್ಯಮದಲ್ಲಿ ಯಾವುದೋ ಒಂದು ಕಾರ್ಯಕ್ರಮ ನೋಡಿ ನನಗೆ ಎಡಭಾಗದ ಸ್ವಾಧೀನವೇ ಹೋಗಬೇಕಿತ್ತು ನಿಮ್ಮಂಥವರ ತಾಯಂದಿರ ಆರ್ಶೀವಾದದಿಂದ ಬದುಕಿದ್ದೇನೆ ಎಂದು ಭಾಷಣದುದ್ದಕ್ಕೂ ಮಾಧ್ಯಮದವರ ವಿರುದ್ಧ ಕಿಡಿಕಾರಿದರು.

ದೇವೇಗೌಡರು ಗ್ರಾಮಪಂಚಾಯತ್ ನಿಂದ ಕೆಂಪುಕೋಟೆಯವರೆಗೂ ನೋಡಿದ್ದಾರೆ. ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿದ್ದೇನೆ, ನನಗೆ ನೀವು ಶಕ್ತಿ ಕೊಟ್ಟಿದ್ದೀರಿ. ನಾನು ಯಾವ ಕುಟುಂಬದ ತಲೆಹೊಡೆದು ರಾಜಕೀಯಕ್ಕೆ ಬಂದಿಲ್ಲ. ಲೇಔಟ್ ಮಾಡಲು ರಾಜಕೀಯಕ್ಕೆ ಬಂದಿಲ್ಲ ಎಂದು ಪರೋಕ್ಷವಾಗಿ ಮಾಜಿ ಶಾಸಕ ಸಿಪಿ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.

Latest Videos
Follow Us:
Download App:
  • android
  • ios