ಬೆಂಗಳೂರು[ಜು. 24]  ಬಡವವರಿಗೆ ಕುಮಾರಸ್ವಾಮಿ ದೊಡ್ಡದೊಂದು ಕೊಡುಗೆ ನೀಡಿ ಹೊರನಡೆದಿದ್ದಾರೆ.  ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಋಣಮುಕ್ತ ಕಾಯ್ದೆ ಜಾರಿಗೆ ತಂದಿದ್ದು, ಭೂಮಿ ಇಲ್ಲದ, 4 ಹೆಕ್ಟೇರ್‌ಗೂ ಕಡಿಮೆ ಜಮೀನು ಇರುವ ಅಥವಾ ವಾರ್ಷಿಕ 1.20 ಲಕ್ಷ ಆದಾಯಕ್ಕೂ ಕಡಿಮೆ ಇರುವ ವ್ಯಕ್ತಿಗಳು ಪಡೆದಿರುವ ಯಾವುದೇ ಖಾಸಗಿ  ಸಾಲ (ಬ್ಯಾಂಕ್ ಸಾಲ ಅಲ್ಲ, ಲೇವಾದೇವಿ ಎಂದುಕೊಳ್ಳಬಹುದು) ಸಾಲ  ಮನ್ನಾ ಆಗಲಿವೆ ಎಂದು  ತಿಳಿಸಿದ್ದಾರೆ.

ಬ್ಯಾಂಕುಗಳ ಹೊರತಾಗಿ, ಖಾಸಗಿ ವ್ಯಕ್ತಿಗಳ, ಲೇವಾದೇವಿದಾರರ ಬಳಿ, ಖಾಸಗಿ ಅವರ ಬಳಿ ಚಿನ್ನ ಅಡವಿಟ್ಟು ಪಡೆದ ಸಾಲ, ಜಮೀನ್ದಾರುಗಳ ಬಳಿ ಪಡೆದಿರುವ ಸಾಲ, ಜಮೀನು ಅಡಮಾನ ಇಟ್ಟು ಖಾಸಗಿ ವ್ಯಕ್ತಿಗಳಿಂದ ಪಡೆದ ಸಾಲಗಳು ಪೂರ್ಣವಾಗಿ ಮನ್ನಾ ಆಗಲಿದೆ ಎಂದು ಮಾಹಿತಿ ನೀಡಿದರು.

‘ರಾಜ್ಯಕ್ಕೆ ಮತ್ತೆ ಎಚ್.ಡಿ.ಕುಮಾಸ್ವಾಮಿ ಮುಖ್ಯಮಂತ್ರಿ’

90 ದಿನಗಳ ಒಳಗಾಗಿ ಅರ್ಜಿ ಹಾಕಬೇಕು: ನಿನ್ನೆ  ಅಂದರೆ ಜುಲೈ 23 ರಂದು ಕಾಯ್ದೆ ಜಾರಿಯಾಗಿದ್ದು ಇಂದಿನಿಂದ 90 ದಿನದ ಒಳಗಾಗಿ ಅಸಿಸ್ಟೆಂಟ್ ಕಮೀಷನರ್ ಅವರ ಬಳಿ ದಾಖಲೆಗಳ ಸಮೇತ ಅಥವಾ ದಾಖಲೆ ಇಲ್ಲದಿದ್ದರೂ ಅರ್ಜಿ ಹಾಕಿಕೊಂಡರೆ ಅರ್ಜಿದಾರರ ಎಲ್ಲ ಖಾಸಗಿ ಸಾಲಗಳು ಮನ್ನಾ ಆಗಲಿವೆ ಎಂದು ತಿಳಿಸಿದರು.

ಆರ್‌ಬಿಐ ಮಾನ್ಯತೆ ಪಡೆದವರಿಗೆ ಕಾಯ್ದೆ ಅನ್ವಯ ಆಗದು: ಆರ್‌ಬಿಐ ಇಂದ ಮಾನ್ಯತೆ ಪಡೆದು ಸಾಲ ನೀಡಿದವರಿಗೆ ಈ ಕಾಯ್ದೆ ಅನ್ವಯ ಆಗುವುದಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದ್ದು, ಸಾಲ ನೀಡಿದವರಿಗೆ ಸರ್ಕಾರದ ವತಿಯಿಂದ ಹಣ ಪಾವತಿ ಆಗಿರುವುದಿಲ್ಲ. ಅವರು ಈಗಾಗಲೇ ಬಡ್ಡಿ ರೂಪದಲ್ಲಿ ಬಡವರಿಂದ ಹಣ ಪಡೆದಿರುತ್ತಾರೆ ಅವರಿಗೆ ಸರ್ಕಾರ ಹಣ ನೀಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.  ಕಳೆದ ವರ್ಷ ಸರಕಾರ ಪಾಸು ಮಾಡಿದ್ದ ಡೆಬ್ಟ್ ರಿಲೀಫ್ ಕಾಯಿದೆಗೆ ಜುಲೈ 16 ರಂದು ರಾಷ್ಟಪತಿ ಅಂಕಿತ ಹಾಕಿದ್ದಾರೆ

ನಿಬಂಧನೆಗಳೇನು?
ಈ ಕಾಯಿದೆಯ ಲಾಭ ಪಡೆದುಕೊಳ್ಳುವವರು ಕೆಳಗಿನ ನಿಬಂಧನೆಗಳಿಗೆ ಒಳಪಡಬೇಕಾಗುತ್ತದೆ. ಈ ಬಗ್ಗೆ   ಜಾಗೃತಿ ಮೂಡಿಸಲು ಜಾಹೀರಾತು ನೀಡಲು ತಿಳಿಸಿದ್ದೇನೆ ಎಂದು ತಿಳಿಸಿದರು. ಆಯಾ ಎಸಿ ಕಚೇರಿಯಲ್ಲಿ  ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

* ಭೂರಹಿತ ಕಾರ್ಮಿಕರು ಮತ್ತು ರೈತರಿಗೆ ಯೋಜನೆ ಲಾಭ ಸಿಗಲಿದೆ.

* ಲಾಭ ಪಡೆಯುವವರು 4 ಹೆಕ್ಟೇರ್‌ ಗಿಂತ ಕಡಿಮೆ ಭೂಮಿ ಹೊಂದಿರಬೇಕು

* ಕುಟುಂಬದ ವಾರ್ಷಿಕ ವರಮಾನ 1.2 ಲಕ್ಷ ಒಳಗೆ ವರಮಾನ ಇರಬೇಕು 

* ಕಾಯಿದೆ ಜಾರಿಯಾಗುವ ಮುನ್ನ ಪಡೆದ ಸಾಲಗಳಿಗೆ ಅನ್ವಯ

* ಸಂಪೂರ್ಣವಾಗಿ ಒನ್ ಟೈಮ್ ರಿಲೀಫ್ ಸಿಗಲಿದೆ