ವಿಶ್ವಾಸ ಮತ ಯಾಚನೆ ವೇಳೆ ಬಿಜೆಪಿ ಮುಖಂಡರು ಗೈರಾಗದಂತೆ ಹೈ ಕಮಾಂಡ್ ಸೂಚನೆ

HD Kumaraswamy faces floor test in Karnataka Assembly today
Highlights

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಎಚ್.ಡಿ ಕುಮಾರಸ್ವಾಮಿ ಅವರ ವಿಶ್ವಾಸ ಮತ ಯಾಚನೆಗೆ ಬಿಜೆಪಿ ಮುಖಂಡರು ಯಾರೂ ಕೂಡ ಗೈರು ಹಾಜರಾಗದಂತೆ ಬಿಜೆಪಿ ಹೈ ಕಮಾಂಡ್ ಸೂಚನೆ ನೀಡಿದೆ. 

ನವದೆಹಲಿ :  ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಎಚ್.ಡಿ ಕುಮಾರಸ್ವಾಮಿ ಅವರ ವಿಶ್ವಾಸ ಮತ ಯಾಚನೆಗೆ ಬಿಜೆಪಿ ಮುಖಂಡರು ಯಾರೂ ಕೂಡ ಗೈರು ಹಾಜರಾಗದಂತೆ ಬಿಜೆಪಿ ಹೈ ಕಮಾಂಡ್ ಸೂಚನೆ ನೀಡಿದೆ. 

ವಿಶ್ವಾಸ ಮತದ ವೇಳೆ ಗೊಂದಲಕ್ಕೆ ಅವಕಾಶ ನೀಡಬೇಡಿ ಎಂದು ಸ್ಪಷ್ಪ ನಿರ್ದೇಶನ ನೀಡಲಾಗಿದೆ. ಅಲ್ಲದೇ ಶಾಂತಿಯುತವಾಗಿ ವರ್ತಿಸಬೇಕು. ಇನ್ನು ಈ ವೇಳೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ.  

ಇನ್ನು ಕರ್ನಾಟಕ ರಾಜಕಾರಣವು ದೇಶದ ಹಲವು ಪಕ್ಷಗಳನ್ನು ಒಗ್ಗೂಡಿಸಿದೆ. ಬಿಜೆಪಿಯಿಂದ ಒಂದು ಕಡೆ ತಪ್ಪಾದರೂ ಕೂಡ ಹಲವು ಕಡೆ ಅದಕ್ಕೆ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ ಎಂದು ಹೈ ಕಮಾಂಡ್ ಶಾಸಕರಿಗೆ ತಿಳಿಸಿದೆ. 

ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್ ಯಡಿಯೂರಪ್ಪ ಅವರ ನಿರ್ದೇಶನದಂತೆ ನಡೆದುಕೊಳ್ಳಬೇಕು. ಕರ್ನಾಟಕದಲ್ಲಿ ರಚನೆಯಾದ ಈ ಮೈತ್ರಿ ಸರ್ಕಾರ ಹಲವು ದಿನಗಳ ಕಾಲ ಉಳಿಯುವುದಿಲ್ಲ.  ಶಾಸಕರು ವಿಶ್ವಾಸವನ್ನು ಕಳೆದುಕೊಳ್ಳಬೇಡಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೂಚನೆ ನೀಡಿದ್ದಾರೆ. 

loader