ಈ ಸಂದರ್ಭದಲ್ಲಿ ಎಸ್.ಎಂ. ಕೃಷ್ಣ ರಾಜಿನಾಮೆ ಕುರಿತು ಮಾತನಾಡಿದ ಅವರು, ಕೃಷ್ಣ ಪ್ರಬುದ್ಧ ರಾಜಕಾರಣಿ, ಅವರ ಮುಂದಿನ ಮಾರ್ಗ ಅವರಿಗೆ ಬಿಟ್ಟದ್ದು, ಅವರನ್ನು ಸಂಪರ್ಕಿಸುವುದಿಲ್ಲವೆಂದಿದ್ದಾರೆ.

ಉಡುಪಿ (ಜ.30): ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಕಡೆಗೋಲು ಕೃಷ್ಣನಿಗೆ ವಿಶೇಷ ಸೇವೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಸ್.ಎಂ. ಕೃಷ್ಣ ರಾಜಿನಾಮೆ ಕುರಿತು ಮಾತನಾಡಿದ ಅವರು, ಕೃಷ್ಣ ಪ್ರಬುದ್ಧ ರಾಜಕಾರಣಿ, ಅವರ ಮುಂದಿನ ಮಾರ್ಗ ಅವರಿಗೆ ಬಿಟ್ಟದ್ದು, ಅವರನ್ನು ಸಂಪರ್ಕಿಸುವುದಿಲ್ಲವೆಂದಿದ್ದಾರೆ.

ಜಾಫರ್ ಷರೀಫ್ ಪಕ್ಷ ತೊರೆಯುವ ಬಗ್ಗೆ ಗೊತ್ತಿಲ್ಲ, ನನಗೂ ಷರೀಫ್ ಗೂ ಸಂಬಂಧವಿಲ್ಲವೆಂದೂ ಅವರು ಹೇಳಿದ್ದಾರೆ.

ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಬಗ್ಗೆ ಕೇಳಿದ ಪ್ರಶ್ನೆಗೆ, ಭಾರತ ಹಲವು ಧರ್ಮಗಳನ್ನೊಳಗೊಂಡ ದೇಶ, ಇಲ್ಲಿ ಹಲವು ಜಾತಿ-ಸಂಸ್ಕೃತಿಯಿದೆ, ಪಾರ್ಲಿಮೆಂಟಲ್ಲಿ ಸಮಯ ಬಂದಾಗ ನನ್ನ ವಾದ ಮಂಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.