ಗುರುವಾರ ಸಂಜೆ ನೇಪಾಳಕ್ಕೆ ಭೇಟಿ ನೀಡಲಿರುವ ದೇವೇಗೌಡರು ಕಾಠ್ಮಂಡುವಿನ ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡಿ ದೇವೇಗೌಡರಿಂದ ವಿಶೇಷ ಪೂಜೆ
ಬೆಂಗಳೂರು: ಒಂದು ಕಡೆ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ನಿಭಿಡತೆಯಿಂದ ಬ್ರೇಕ್ ತೆಗೆದುಕೊಳ್ಳಲು ಯೂರೋಪ್ ಪ್ರವಾಸಲ್ಲಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೈಲಾಸ ಯಾತ್ರೆಯಲ್ಲಿದ್ದಾರೆ.
ಈ ನಡುವೆ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ್ರು ಕೂಡಾ ವಿದೇಶ ಪ್ರವಾಸಕ್ಕೆ ಹೊರಟ್ಟಿದ್ದಾರೆ. ದೇವೇಗೌಡರು ಇಂದು ಸಂಜೆ ನೇಪಾಳಕ್ಕೆ ಭೇಟಿ ನೀಡಲಿದ್ದು, ನಾಳೆ ಬೆಳಗ್ಗೆ ಕಾಠ್ಮಂಡುವಿನ ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
Scroll to load tweet…
