ಜೀ ಕನ್ನಡದಲ್ಲಿ ಪ್ರಸಾರವಾಗುವ, ನಟ ರಮೇಶ್‌ ಅರವಿಂದ್‌ ನಡೆಸಿಕೊಡುವ ‘ವೀಕೆಂಡ್‌ ವಿತ್‌ ರಮೇಶ್‌' ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಈ ವಾರದ ಅತಿಥಿ | ಮುಂದಿನ ಸೀಸನ್‌ನಲ್ಲಿ ಜನಸಾಮಾನ್ಯರಿಗೂ ಅವಕಾಶ
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟಲ್ಲಿ ಯಾರನ್ನು ಕೂರಿಸಬೇಕು ಎಂಬ ಬಗ್ಗೆ ಇತ್ತೀಚೆಗಷ್ಟೇ ವೀಕ್ಷಕರು ವಿಧವಿಧ ಮಾತಾಡಿದ್ದರು. ಇದೀಗ ವೀಕ್ಷಕರ ಮಾತಿಗೂ ಬೆಲೆ ಬಂದಂತಿದೆ. ವೀಕೆಂಡ್ ವಿತ್ ರಮೇಶ್, ಸೀಸನ್-4ರಲ್ಲಿ ಜನಸಾಮಾನ್ಯ ಸಾಧಕರಿಗೂ ಹಾಟ್ಸೀಟ್ ಗೌರವ ದೊರಕಲಿದೆ.
ವೀಕೆಂಡ್ ವಿತ್ ರಮೇಶ್ ಸಾಧಕರ ಕುರ್ಚಿಯಲ್ಲಿ ಈ ವಾರ ಮಾಜಿ ಪ್ರಧಾನಿ ದೇವೇಗೌಡರು ರಾರಾಜಿಸಲಿದ್ದಾರೆ. ಅವರ ಯಶೋಗಾಥೆ ಶನಿವಾರ ಮತ್ತು ಭಾನುವಾರ ಪ್ರಸಾರವಾಗಲಿದೆ. ಕನ್ನಡಿಗರೊಬ್ಬರು ಪ್ರಧಾನಿ ಹುದ್ದೆ ಅಲಂಕರಿಸಿದ ಮಹಾನ್ ಕತೆ, ಅವರು ನೀಡಿರುವ ಸ್ಪೂರ್ತಿ, ಅವರ ಜೀವನದ ಸಾಧನೆಯೇ ಅವರನ್ನು ಕಾರ್ಯಕ್ರಮಕ್ಕೆ ಕರೆಯಲು ಸ್ಪೂರ್ತಿ. ದೇವೇಗೌಡರು ನಡೆದು ಬಂದ ದಾರಿಯ ಚಿತ್ರಣ ಈ ಸಂಚಿಕೆಯಲ್ಲಿದೆ ಎನ್ನುತ್ತಾರೆ ಝೀ ಟೀವಿ ಮುಖ್ಯಸ್ಥ ರಾಘವೇಂದ್ರ ಹುಣಸೂರು.