ಮಂಡ್ಯ: ಸಾರಿಗೆ ಸಂಸ್ಥೆಯ ಬಸ್ ದರ ಏರಿಕೆ ನಿರ್ಧಾರವನ್ನು ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ಸಮರ್ಥಿಸಿ ಕೊಂಡಿದ್ದಾರೆ. ‘‘ಡೀಸೆಲ್ ದರ ಇದೇ ರೀತಿ ಹೆಚ್ಚಾಗುತ್ತಿದ್ದರೆ ಬಸ್ ಅನ್ನು ನೀರು ಹಾಕಿ ಓಡಿಸಲು ಆಗುತ್ತೇನ್ರೀ’’ ಎಂದು ಅವರು ಪ್ರಶ್ನಿಸಿದ್ದಾರೆ. 

ಇಲ್ಲಿನ ಬೆಳ್ಳೂರು ಕ್ರಾಸ್‌ನಲ್ಲಿ ಭಾನುವಾರ ಸುದ್ದಿಗಾರ ರೊಂದಿಗೆ ಮಾತನಾಡಿದರು. ಬಸ್ ಪ್ರಯಾಣ ದರವನ್ನು ಸುಖಾ ಸುಮ್ಮನೆ ಏರಿಕೆ ಮಾಡುತ್ತಿಲ್ಲ. ಕಾರಣ ಕೊಟ್ಟು ದರ ಏರಿಕೆ ಮಾಡುತ್ತಿದ್ದಾರೆ. ಪೆಟ್ರೋಲ್ ಡಿಸೇಲ್ ದರ ತುಟ್ಟಿಯಾಗಿದೆ. ಸದ್ಯಕ್ಕೆ ದರ ಇಳಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಹೀಗಾಗಿ ಬಸ್ ದರ ಏರಿಕೆ ಮಾಡುವುದರಲ್ಲಿ ತಪ್ಪಿಲ್ಲ ಎಂದರು.

ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ಗೌರಿ ಗಣೇಶ ಹಬ್ಬದ ಬಳಿಕ ಕೆಎಸ್‌ಆರ್‌ಟಿಸಿ ಬಸ್ ದರ ಏರಿಕೆ ಬಿಸಿಯೂ ತಟ್ಟ ಲಿದೆ. ಮುಂದಿನ ವಾರ ಕೆಎಸ್‌ಆರ್ ಟಿಸಿ ಬಸ್ ಪ್ರಯಾ ಣ ದರವನ್ನು ಶೇ. 18ರಷ್ಟು ಹೆಚ್ಚಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.