"ಮೋದಿಯವರೇ, ರಾಜ್ಯದಲ್ಲಿ ಮುಸ್ಲಿಮರಿರಬಹುದು, ಕ್ರಿಶ್ಚಿಯನ್ನರಿರಬಹುದು, ಹಿಂದೂಗಳು ಇರಬಹುದು. ನಾವು ಸುಖ ಶಾಂತಿಯಿಂದ ಬದುಕಬಾರದ್ವಾ? ಮೋದಿಯವರೇ, ನೀವು ಹಿಂದೂ ರಾಷ್ಟ್ರ ಮಾಡಬೇಕೆಂದು ಪ್ರಯತ್ನ ಪಟ್ಟರೆ... ನನ್ನ ರಾಜ್ಯದಲ್ಲಿ ಅದನ್ನು ಬಿಡೋದಿಲ್ಲ," ಎಂದು ಜೆಡಿಎಸ್ ಮುಖ್ಯಸ್ಥರು ಪಣ ತೊಟ್ಟರು.
ಕಲಬುರ್ಗಿ(ಸೆ. 16): ಪ್ರಧಾನಿ ನರೇಂದ್ರ ಮೋದಿ ದೇಶವನ್ನ ಹಿಂದೂ ದೇಶವನ್ನಾಗಿ ಮಾಡಲು ಹೊರಟಿದ್ದಾರೆ. ಆದ್ರೆ ನನ್ನ ಜನ್ಮವಿರುವವರೆಗೂ ರಾಜ್ಯವನ್ನು ಹಿಂದೂ ನಾಡನ್ನಾಗಿ ಮಾಡಲು ಬಿಡುವುದಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಪಣ ತೊಟ್ಟಿದ್ದಾರೆ. ಇಲ್ಲಿ ಏರ್ಪಡಿಸಲಾಗಿದ್ದ ಜೆಡಿಎಸ್ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ದೇವೇಗೌಡ್ರು, ರಾಜ್ಯದಲ್ಲಿ ಜನತೆ ಸುಖ, ಶಾಂತಿಯಿಂದ ನೆಮ್ಮದಿಯ ಬದುಕು ಸಾಗಿಸಲು ಬಿಡಿ ಎಂದು ಮೋದಿಗೆ ಮನವಿ ಮಾಡಿಕೊಂಡರು.
"ಮೋದಿಯವರೇ, ರಾಜ್ಯದಲ್ಲಿ ಮುಸ್ಲಿಮರಿರಬಹುದು, ಕ್ರಿಶ್ಚಿಯನ್ನರಿರಬಹುದು, ಹಿಂದೂಗಳು ಇರಬಹುದು. ನಾವು ಸುಖ ಶಾಂತಿಯಿಂದ ಬದುಕಬಾರದ್ವಾ? ಮೋದಿಯವರೇ, ನೀವು ಹಿಂದೂ ರಾಷ್ಟ್ರ ಮಾಡಬೇಕೆಂದು ಪ್ರಯತ್ನ ಪಟ್ಟರೆ... ನನ್ನ ರಾಜ್ಯದಲ್ಲಿ ಅದನ್ನು ಬಿಡೋದಿಲ್ಲ," ಎಂದು ಜೆಡಿಎಸ್ ಮುಖ್ಯಸ್ಥರು ಪಣ ತೊಟ್ಟರು.
ಇದೇ ವೇಳೆ, ನೂತನ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯವರನ್ನೂ ದೇವೇಗೌಡರು ತರಾಟೆಗೆ ತೆಗೆದುಕೊಂಡರು. ಸುವರ್ಣನ್ಯೂಸ್'ನಲ್ಲಿ ಪ್ರಸಾರವಾದ ಸುದ್ದಿ ವಿಶ್ಲೇಷಣೆಯನ್ನು ಉಲ್ಲೇಖಿಸುತ್ತಾ ಹೇಳಿದ ದೇವೇಗೌಡರು, "ಕೇಂದ್ರದ ಮಂತ್ರಿ ಬೆಂಕಿಯ ಉಂಡೆಯನ್ನು ಕೈಲಿಟ್ಟುಕೊಂಡು ರಾಜ್ಯಕ್ಕೆ ಬರುತ್ತಿದ್ದಾರೆ," ಎಂದು ಉತ್ತರಕನ್ನಡ ಸಂಸದರನ್ನು ಪರೋಕ್ಷವಾಗಿ ಟೀಕಿಸಿದರು.