ಬೆಂಗಳೂರು [ಜು.25] :  ರಾಜ್ಯದಲ್ಲಿ ಅತೃಪ್ತರ ರಾಜೀನಾಮೆಯಿಂದ ಮೈತ್ರಿ ಸರ್ಕಾರ ಪತನವಾಗಿದೆ. ಪತನದ ರೂವರಿಗಳಿಗೆ ಜೆಡಿಎಸ್ ಹಿರಿಯ ನಾಯಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಖೆಡ್ಡಾ ಸಿದ್ಧಮಾಡಿದ್ದಾರೆ. 

ಗೌಡರ ಹಿಟ್ ಲಿಸ್ಟ್ ನಲ್ಲಿ ಎಲ್ಲಾ ರೆಬೆಲ್ ಶಾಸಕರು ಇದ್ದು, ಇವರನ್ನು ಹಣಿಯಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ.  ರಾಜೀನಾಮೆ ಅಂಗೀಕಾರವಾದಲ್ಲಿ ಆ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆ ಮುಗಿಯುವವರೆಗೂ ಮೈತ್ರಿ ಮುಂದುವರಿಸಲು ನಿರ್ಧರಿಸಿದ್ದಾರೆ. 

ನಮ್ಮಲ್ಲಿಯೇ ಅಪಸ್ವರ ಎದುರಾದಲ್ಲಿ ರೆಬೆಲ್ ಆಗಿರುವವರನ್ನು ಕಟ್ಟಿ ಹಾಕುವುದು ಅಸಾಧ್ಯ. ಇದರಿಂದ ನಮ್ಮನ್ನು ಈ ಹಂತಕ್ಕೆ ತಂದವರಿಗೆ ಬುದ್ದಿ ಕಲಿಸಲು ಸೋಲಿನ ರುಚಿ ತೋರಿಸಬೇಕು. ಮೈತ್ರಿಯಲ್ಲೇ ಚುನಾವಣೆ ಎದುರಿಸಿ ಮುಗಿಸಬೇಕು.  ಪಕ್ಷಾಂತರ ಮಾಡುವವರಿಗೆ ಇದೊಂದು ಉದಾಹರಣೆಯಾಗಬೇಕು ಎಂದು ದೇವೇಗೌಡರು ಹೇಳಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಂಗಳೂರು, ಮಂಡ್ಯ, ಚಿಕ್ಕಬಳ್ಳಾಪುರದಲ್ಲಿ ರೆಬೆಲ್ಸ್ ಎದುರಿಸಲು ಮೈತ್ರಿ ಅನಿವಾರ್ಯ.  ಉತ್ತರ ಕರ್ನಾಟಕದಲ್ಲಿ ಬೇಕಾದರೆ ಕಾಂಗ್ರೆಸಿನಿಂದ ಅಭ್ಯರ್ಥಿಗಳು ಕಣಕ್ಕಿಳಿಯಲಿ ಎಂದರು.