ಜಾಟ್ ಮತ್ತು ಇತರ ಐದು ಸಮುದಾಯಗಳಿಗೆ ಶೇ.10 ರಷ್ಟು ಮೀಸಲಾತಿ ನೀಡಬೇಕೆನ್ನುವ ಗುಜರಾತ್ ರಾಜ್ಯ ಸರ್ಕಾರದ ಕ್ರಮವನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಎತ್ತಿ ಹಿಡಿದಿದೆ.

ನವದೆಹಲಿ (ಸೆ.01): ಜಾಟ್ ಮತ್ತು ಇತರ ಐದು ಸಮುದಾಯಗಳಿಗೆ ಶೇ.10 ರಷ್ಟು ಮೀಸಲಾತಿ ನೀಡ ಹರ್ಯಾಣ ರಾಜ್ಯ ಸರ್ಕಾರದ ಕ್ರಮವನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಎತ್ತಿ ಹಿಡಿದಿದೆ.

ಸರ್ಕಾರದ ಸಮಿತಿ ಅಂತಿಮಗೊಳಿಸುವವರೆಗೂ ಇದರ ಜಾರಿಗೆ ತಡೆ ನೀಡಿದೆ.ಮಾ.31, 2018 ರವರೆಗೆ ಇದನ್ನು ಜಾರಿಗೊಳಿಸಲು ತಡೆ ನೀಡಲಾಗಿದೆ.

ರಾಜ್ಯ ಸರ್ಕಾರ ಸಲ್ಲಿಸಿದ ಮಾಹಿತಿ ಆಧಾರದ ಮೇಲೆ ರಾಜ್ಯ ಹಿಂದುಳಿದ ವರ್ಗದ ಆಯೋಗ ಮೀಸಲಾತಿಯನ್ನು ನಿಗದಿಪಡಿಸುತ್ತದೆ. ಈಗಾಗಲೇ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಅನ್ವಯ ಮೀಸಲಾತಿ ಶೇ. 50 ಕ್ಕಿಂತ ಹೆಚ್ಚಿರಬಾರದು. ಈಗ ಜಾಟ್ ಮತ್ತು ಇತರ ಐದು ಸಮುದಾಯಗಳಿಗೆ ಶೇ.10 ರಷ್ಟು ಮೀಸಲಾತಿ ನೀಡಿರುವುದರಿಂದ ಅದು ಶೇ.60 ರಷ್ಟು ಮೀಸಲಾತಿ ಆಗುವುದರಿಂದ ಹಿಂದುಳಿದ ವರ್ಗಗಳ ಆಯೋಗ ಹೊಸ ಮೀಸಲಾತಿ ಸೂತ್ರವನ್ನು ಸಿದ್ದಪಡಿಸಬೇಕಾಗಿದೆ. ಆಗ ಬೇರೆ ಸಮುದಾಯಗಳ ಮೀಸಲಾತಿ ಕಡಿಯಾಗುವ ಸಾಧ್ಯತೆಯಿದೆ.