ನವದೆಹಲಿ: ಧಾರ್ಮಿಕ ಚಿಹ್ನೆಗಳನ್ನು ಹೊಂದಿರುವ ನಾಣ್ಯಗಳನ್ನು ಹಿಂಪಡೆಯಬೇಕೆಂದು ಕೋರಲಾದ ಅರ್ಜಿಯೊಂದನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ನಾಣ್ಯಗಳಲ್ಲಿ ಧಾರ್ಮಿಕ ಚಿಹ್ನೆಗಳಿರುವುದರಿಂದ ದೇಶದ ಜಾತ್ಯಾತೀತ ನೆಲೆಗೆ ಯಾವುದೇ ಧಕ್ಕೆಯಿಲ್ಲ ಎಂದು ಕೋರ್ಟ್ ಹೇಳಿದೆ.

2010 ಮತ್ತು 2013ರಲ್ಲಿ ಬೃಹದೀಶ್ವರ ದೇವಸ್ಥಾನ ಮತ್ತು ಮಾತಾ ವೈಷ್ಣೋದೇವಿ ದೇವಾಲಯದ ಫೋಟೊಗಳನ್ನು ಮುದ್ರಿಸಲಾಗಿರುವ ನಾಣ್ಯಗಳನ್ನು ಹಿಂಪಡೆಯುವಂತೆ ಆರ್‌ಬಿಐ ಮತ್ತು ಹಣಕಾಸು ಸಚಿವಾಲಯಕ್ಕೆ ನಿರ್ದೇಶಿಸುವಂತೆ ಇಬ್ಬರು ದೆಹಲಿ ನಿವಾಸಿಗಳು ಪಿಐಎಲ್ ಸಲ್ಲಿಸಿದ್ದರು. ಪ್ರಭಾರ ಮುಖ್ಯನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ನ್ಯಾ. ಸಿ. ಹರಿ ಶಂಕರ್ ನ್ಯಾಯಪೀಠ ಅರ್ಜಿ ನಿರಾಕರಿಸಿತು.