ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಬಾರ್ಗಳ ಪುನರಾರಂಭಕ್ಕೆ ಅವಕಾಶ ಕೋರಿ, ಬ್ರಿಗೇಡ್‌ ರಸ್ತೆಯ ಸಿದ್ದಿ ಎಂಟರ್‌ಪ್ರೈಸಸ್‌ ಮತ್ತಿತರ ಬಾರ್ ಅಂಡ್ ರೆಸ್ಟೋರೆಂಟ್‌ ಮಾಲೀಕರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಬೆಂಗಳೂರು(ಆ.22): ರಾಜಧಾನಿ ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಾರ್ ಮತ್ತು ಪಬ್ಗಳ ಪುನರಾರಂಭಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ನವೀನ್ ಕೊಠಾರಿ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಬಾರ್ಗಳ ಪುನರಾರಂಭಕ್ಕೆ ಅವಕಾಶ ಕೋರಿ, ಬ್ರಿಗೇಡ್ ರಸ್ತೆಯ ಸಿದ್ದಿ ಎಂಟರ್ಪ್ರೈಸಸ್ ಮತ್ತಿತರ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ತೀರ್ಪಿನಿಂದ ಬಾರ್ ಮಾಲೀಕರು ಹಾಗೂ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಮರುಪರಿಶೀಲಿಸದ ಹಿನ್ನಲೆಯಲ್ಲಿ, ಬಾರ್ಗಳ ಪುನರಾರಂಭಕ್ಕೆ ಅವಕಾಶ ಕೋರಿದ್ದ ಮನವಿಯನ್ನ ಹೈಕೋರ್ಟ್ ತಳ್ಳಿ ಹಾಕಿದೆ. ಈ ಮೂಲಕ ರಾಜಧಾನಿಯ ಹೆದ್ದಾರಿ ಪಬ್ ಅಂಡ್ ಬಾರ್'ಗಳ ಪುನರಾರಂಭದ ಕನಸಿಗೆ ಹಿನ್ನಡೆಯಾದಂತಾಗಿದೆ.
(ಸಾಂದರ್ಭಿಕ ಚಿತ್ರ)
