ಈ ಪ್ರಮುಖ ದಾಖಲಾತಿಗೆ ಪಾನ್ ಕಾರ್ಡ್ ಲಿಂಕ್ ಮಾಡಿಲ್ಲವೇ..? ಲಾಸ್ಟ್ ಡೇಟ್ ಯಾವಾಗ..?

Have you linked your PAN card with this important document?
Highlights

ನೀವಿನ್ನೂ ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡಿಲ್ಲವೇ. ಹಾಗಾದ್ರೆ ನಿಮಗಿರೋದು ಇನ್ನು  10 ದಿನ ಮಾತ್ರವೇ. ಈ ಹಿಂದೆ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್  ಜೂನ್ 30ರ ವರೆಗೂ ಲಿಂಕ್ ಮಾಡಲು ಸಮಯಾವಕಾಶ ವಿಸ್ತರಿಸಿತ್ತು. ಇದೀಗ ಕೇವಲ 10 ದಿನ ಸಮಯವಾಕಾಶವಿದ್ದು, ಅಷ್ಟರಲ್ಲೇ ನೀವು ಲಿಂಕ್ ಮಾಡಬೇಕಿದೆ.  

ನವದೆಹಲಿ :  ನೀವಿನ್ನೂ ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡಿಲ್ಲವೇ. ಹಾಗಾದ್ರೆ ನಿಮಗಿರೋದು ಇನ್ನು  10 ದಿನ ಮಾತ್ರವೇ. ಈ ಹಿಂದೆ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್  ಜೂನ್ 30ರ ವರೆಗೂ ಲಿಂಕ್ ಮಾಡಲು ಸಮಯಾವಕಾಶ ವಿಸ್ತರಿಸಿತ್ತು. ಇದೀಗ ಕೇವಲ 10 ದಿನ ಸಮಯವಾಕಾಶವಿದ್ದು, ಅಷ್ಟರಲ್ಲೇ ನೀವು ಲಿಂಕ್ ಮಾಡಬೇಕಿದೆ.  

ಈ ಹಿಂದೆ ಅನೇಕ  ಬಾರಿ ಡೆಡ್ ಲೈನ್ ವಿಸ್ತರಣೆ ಮಾಡಲಾಗಿತ್ತು. ಕಳೆದ ವರ್ಷ ಮೊದಲು ಜುಲೈ 31ರವರೆಗೆ ಸಮಯಾವಕಾಶ ನೀಡಲಾಗಿತ್ತು. ಬಳಿಕ ಮತ್ತೆ ಆಗಸ್ಟ್ 31 - 2017ಕ್ಕೆ  ವಿಸ್ತರಣೆ ಮಾಡಲಾಗಿತ್ತು. ಮತ್ತೆ ಡಿಸೆಂಬರ್ 31, 2017ಕ್ಕೆ ವಿಸ್ತರಣೆ ಮಾಡಲಾಗಿತ್ತು.

ಅದಾದ ಬಳಿಕ ಸುಪ್ರೀಂಕೋರ್ಟ್ ನಲ್ಲಿ ಮತ್ತೆ 31 ಮಾರ್ಚ್  2018 ರವರೆಗೆ ವಿಸ್ತರಣೆ ಮಾಡಲಾಗಿದ್ದು, ಬಳಿಕ ಮತ್ತೆ 3 ತಿಂಗಳು ಹೆಚ್ಚುವರಿ ಸಮಯಾವಕಾಶ ನೀಡಲಾಯ್ತು.  ಇದೀಗ ಇದೇ ಜೂನ್ 31 ಕ್ಕೆ ಆಧಾರ್  ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡುವ ಅವಧಿ ಮುಕ್ತಾಯವಾಗಲಿದೆ.  

ಸೆಕ್ಷನ್ 139 ಎಎ[2] ಆದಾಯ ತೆರಿಗೆ ಕಾಯ್ದೆ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಲಿಂಕ್ ಮಾಡುವುದು ಕಡ್ಡಾಯ ವಾಗಿದೆ. ನಿಮ್ಮ ಪಾನ್ ಹಾಗೂ ಆಧಾರ್ ಲಿಂಕ್ ಮಾಡಲು  ಇಂಕಮ್ ಟ್ಯಾಮಕ್ಸ್ ಇ ಫೈಲಿಂಗ್ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಮಾಡಬಹುದಾಗಿದೆ. 

 

ಆದರೆ ಈ ಬಗ್ಗೆ ಸುಪ್ರೀಂಕೋರ್ಟ್ ನಿಂದ ಇನ್ನೂ ಕೂಡ ಯಾವುದೇ ಸ್ಪಷ್ಟವಾದ ತೀರ್ಪು ಹೊರಬಿದ್ದಿಲ್ಲ. 

loader