ಗರ್ಭಿಣಿ ಜೀವ ರಕ್ಷಿಸಿದ ರೈಲ್ವೇ ಪೊಲೀಸ್ ಅಧಿಕಾರಿ! ಆ್ಯಂಬುಲೆನ್ಸ್ ಗೂ ಕಾಯದೆ ಗರ್ಭಿಣಿ ಹೊತ್ತು ನಡೆದ ಪೊಲೀಸ್! ರೆಲ್ವೇ ಪೊಲೀಸ್ ಅಧಿಕಾರಿ ಸೋನು ಕುಮಾರ್ ರಾಜೋರಾ! ರೈಲ್ವೇ ನಿಲ್ದಾಣದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಭಾವನಾ! ಪೊಲೀಸ್ ಅಧಿಕಾರಿ ಕಾರ್ಯಕ್ಕೆ ಎಲ್ಲೆಡೆಯಿಂದ ಭಾರೀ ಮೆಚ್ಚುಗೆ  

ಆಗ್ರಾ(ಸೆ.15): ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಲು ಆ್ಯಂಬುಲೆನ್ಸ್ ಗೂ ಕಾಯದೇ ಪೊಲೀಸ್ ಅಧಿಕಾರಿಯೋರ್ವರು ಆಕೆಯನ್ನು ಹೊತ್ತುಕೊಂಡು ಆಸ್ಪತ್ರೆಗೆ ದಾಖಲಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಮಥುರಾ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಭಾವನಾ ಎಂಬ ಗರ್ಭಿಣಿ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಭಾವನಾಳ ನರಳಾಟ ಕಂಡ ರೈಲ್ವೆ ಪೊಲೀಸ್ ಸೋನು ಕುಮಾರ್ ರಾಜೋರಾ, ಕೂಡಲೇ ಆಕೆಯನ್ನು ಹೊತ್ತುಕೊಂಡು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಇದಕ್ಕೂ ಮೊದಲು ಸೋನು ಆ್ಯಂಬುಲೆನ್ಸ್ ಗೆ ಫೋನ್ ಮಾಡಿದ್ದರೂ, ಆ್ಯಂಬುಲೆನ್ಸ್ ತಡವಾಗಿ ಬರಲಿದೆ ಎಂದು ಅರಿತ ಅಧಿಕಾರಿ ಗರ್ಭಿಣಿಯನ್ನು ಹೊತ್ತುಕೊಂಡೇ ಆಸ್ಪತ್ರೆಗೆ ದೌಡಾಯಿಸಿದರು ಎನ್ನಲಾಗಿದೆ.

Scroll to load tweet…

ಇನ್ನು ಆಸ್ಪತ್ರೆಯಲ್ಲಿ ಭಾವನಾ ಹೆರಿಗೆ ಯಶಶ್ವಿಯಾಗಿದ್ದು, ಆಕೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಕುರಿತು ಮಾಹಿತಿ ನೀಡಿರುವ ಮಥುರಾ ಮಹಿಳಾ ಆಸ್ಪತ್ರೆ ವೈದ್ಯರು, ಭಾವನಾಳನ್ನು ಆಸ್ಪತ್ರೆಗೆ ದಾಖಲಿಸುವುದು ಸ್ವಲ್ಪ ತಡವಾಗಿದ್ದರೂ ಆಕೆ ಮತ್ತು ಮಗು ಪ್ರಾಣಕ್ಕೆ ಅಪಾಯ ಇತ್ತು ಎಂದು ತಿಳಿಸಿದ್ದಾರೆ.

ಇದೇ ವೇಳೆ ಪೊಲೀಸ್ ಅಧಿಕಾರಿ ಸೋನು ಕುಮಾರ್ ಅವರ ಕಾರ್ಯಕ್ಕೆ ಎಲ್ಲೆಡೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಸೋನು ಕುಮಾರ್ ಗರ್ಭಿಣಿ ಭಾವನಾ ಅವರನ್ನು ಹೊತ್ತು ಓಡುತ್ತಿರುವ ಫೋಟೋ ಭಾರೀ ವೈರಲ್ ಆಗಿದೆ.