ಬೆಂಗಳೂರು[ಮೇ. 24]   ಮಾಜಿ ಸಿಎಂ‌, ದೋಸ್ತಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ  ಅವರನ್ನು ಸಚಿವ ಎಚ್ ಡಿ ರೇವಣ್ಣ ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ಪುತ್ರ ಪ್ರಜ್ವಲ್ ರಾಜೀನಾಮೆ ವಿಚಾರವನ್ನು ರೇವಣ್ಣ ಮಾತನಾಡಿದರು. 38 ಜನ ಜೆಡಿಎಸ್ ಎಂಎಲ್ಎಗಳಿದ್ದಾರೆ. ಸರ್ಕಾರ ಸುಭದ್ರವಾಗಿದೆ. ಪರಮೇಶ್ವರ ಸಹ ಕೂಡ ಕುಮಾರಸ್ವಾಮಿ ಸಿಎಂ ಆಗಿರಬೇಕು ಎಂದಿದ್ದಾರೆ. ಇಂತಹ ಸಂಧರ್ಭದಲ್ಲಿ ಯಾವುದೇ‌ ನಿರ್ಣಯ ತೆಗೆದುಕೊಳ್ಳದಂತೆ ಸೂಚಿಸಿದ್ದಾರೆ ಎಂದರು.

ಬದಲಾಗುತ್ತಿರುವ ರಾಜ್ಯ ರಾಜಕೀಯ ಚಿತ್ರಣ: ದಿಢೀರ್ ಸಿದ್ದು ಭೇಟಿ ಮಾಡಿದ ಸಿಎಂ

 ಪ್ರಜ್ವಲ್ ತಾತ 60 ವರ್ಷ ಪ್ರತಿನಿಧಿಸಿದ್ದ ಕ್ಷೇತ್ರ ಹಾಸನ. ಪಾಪ ಅವರು ದೊಡ್ಡವರು ಆದರೆ ಸೋತಿದ್ದಾರೆ ಎಂಬುದು ನೋವಿನ ಸಂಗತಿ. ಇಂತಹ ಎಷ್ಟೋ ಚುನಾವಣೆಯನ್ನು ಅವರು ಎದುರಿಸಿದ್ದಾರೆ. ಹೀಗಾಗಿ ತಾತನಿಗಾಗಿ ತ್ಯಾಗ ಮಾಡುವುದಾಗಿ ಹೇಳಿದ್ದಾರೆ ಎಂದರು.