ಹಾಸನದ ಸರ್ಕಾರಿ ನೌಕರನ ವಿರುದ್ಧ ಯುವತಿಯೊಬ್ಬಳು MeToo ಆರೋಪ ಮಾಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.

ಹಾಸನ, [ಅ.31]: ದೇಶದೆಲ್ಲೆಡೆ ಭಾರಿ ಸಂಚಲನ ಉಂಟು ಮಾಡಿರುವ ಮೀಟೂ ಅಭಿಯಾನ ಸಾಕಷ್ಟು ವಿವಾದ ಸೃಷ್ಟಿಸಿದರೂ ಕೂಡ ಅನೇಕರಿಗೆ ತಮ್ಮ ಕರಾಳ ಅನುಭವ ಬಿಚ್ಚಿಡಲು ವೇದಿಕೆಯಾಗಿದೆ. 

ಇದೇ ಅಭಿಯಾನದಲ್ಲಿ ಹಾಸನದ ಯುವತಿಯೊಬ್ಬಳು ತನಗಾದ ನೋವನ್ನು ತೋಡಿಕೊಂಡಿದ್ದಾಳೆ. ಹೆಸರೇಳಲು ಇಚ್ಛಿಸದ ಯುವತಿ ಸಾಮಾಜಿಕ ಜಾಲತಾಣಗಳ ಮೂಲಕ ನೋವು ಹೊರ ಹಾಕಿದ್ದಾಳೆ. 

ನಿವೃತ್ತಿ ಅಂಚಿನಲ್ಲಿರುವ‌ ಹಾಸನದ ಸರ್ಕಾರಿ ನೌಕರ ಕೃಷ್ಣೇಗೌಡ ಎಂಬುವರ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾಳೆ. ಕೆಲಸ ಕೊಡಿಸುವ ಹೆಸರಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ. 

ಮೊಬೈಲ್ ನಂಬರ್ ಪಡೆದು ಮುತ್ತು ನೀಡುವಂತೆ ಹಾಗೂ ಎಲ್ಲಾ ರೀತಿಯಲ್ಲು ಸಹಕರಿಸುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.

ಈ ಪ್ರಕರಣದಿಂದ ನಾನು ಖಿನ್ನತೆಗೆ ಒಳಗಾಗಿದ್ದೇನೆ. ನನ್ನಂತ ಅಮಾಯಕ ಹೆಣ್ಣುಮಕ್ಕಳಿಗೆ ನ್ಯಾಯ ಬೇಕು. ಹಾಸನದ ಎಸ್ಪಿ ಪ್ರಕಾಶ್ ಗೌಡರಿಗೆ ತಲುಪವವರೆಗೂ ಈ ವಿಡಿಯೋ ಶೇರ್​ ಮಾಡಿ ಎಂದು ಯುವತಿ ಮನವಿ ಮಾಡಿಕೊಂಡಿದ್ದಾಳೆ.