ಈ ದುರಂತ ಸೋಮವಾರ ರಾತ್ರಿ ಸಂಭವಿಸಿದ್ದು, ಇಂದು ಬೆಳಗ್ಗೆ ಮೃತದೇಹವೊಂದು ಕೆರೆಯಲ್ಲಿ ತೇಲುತ್ತಿರುವುದನ್ನು ಕಂಡ ಸ್ಥಳೀಯರು ನೋಡಿದ್ದಾರೆ.ಈ ಮೃತದೇಹವನ್ನ ಎತ್ತಲು ಪ್ರಯತ್ತಿಸುತ್ತಿದ್ದಾಗ ಕಾರು ಕೂಡ ಕೆರೆಯಲ್ಲಿ ಮುಳುಗಿರುವುದು ಗೊತ್ತಾಗಿದೆ.

ಹಾಸನ(ಸೆ.27): ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಕಾರು ಉರುಳಿ ಬಿದ್ದು ಐವರು ಜಲಸಮಾಧಿ ಆಗಿರೋ ಘಟನೆ ಹಾಸನ ತಾಲೂಕಿನ ಹನುಮನಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಮೃತರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಮಳೆ ಸುರಿಯುತ್ತಿದ್ದುದ್ದರಿಂದ ರಸ್ತೆ ಗೊತ್ತಾಗದೆ ಕೆರೆಗೆ ಕಾರು ಉರುಳಿರುವ ಶಂಕೆ ವ್ಯಕ್ತವಾಗಿದೆ. ಈ ದುರಂತ ಸೋಮವಾರ ರಾತ್ರಿ ಸಂಭವಿಸಿದ್ದು, ಇಂದು ಬೆಳಗ್ಗೆ ಮೃತದೇಹವೊಂದು ಕೆರೆಯಲ್ಲಿ ತೇಲುತ್ತಿರುವುದನ್ನು ಕಂಡ ಸ್ಥಳೀಯರು ನೋಡಿದ್ದಾರೆ.ಈ ಮೃತದೇಹವನ್ನ ಎತ್ತಲು ಪ್ರಯತ್ತಿಸುತ್ತಿದ್ದಾಗ ಕಾರು ಕೂಡ ಕೆರೆಯಲ್ಲಿ ಮುಳುಗಿರುವುದು ಗೊತ್ತಾಗಿದೆ.

 ಆ ಬಳಿಕ ಕಾರಿನಲ್ಲಿ ನಾಲ್ವರ ಮೃತದೇಹಗಳು ಪತ್ತೆಯಾಗಿದೆ. ಕ್ರೇನ್ ಸಹಾಯದಿಂದ ಕಾರನ್ನು ನೀರಿನಿಂದ ಮೇಲೆ ಎತ್ತಲಾಯಿತು. ಹೊಳೆನರಸೀಪುರ ತಾಲೂಕಿನ ತಟ್ಟೆಪುರದ ಅನಿಲ್, ಶಿವಮೊಗ್ಗ ಮೂಲದ ಉಮೇಶ್ ಹಾಗೂ ಅರಸೀಕೆರೆ ಅಂಜನ್ ಎಂಬುವರ ಗುರುತು ಪತ್ತೆಯಾಗಿದ್ದು, ಇಬ್ಬರು ಮಹಿಳೆಯರ ಗುರುತು ಪತ್ತೆಯಾಗಬೇಕಿದೆ.