ಹಾಸನ :  "ಐ ಅ್ಯಮ್ ವರ್ಕಿಂಗ್ ಇಂಡಿಪೆಂಡೆಂಟ್ಲಿ"  ಯಾರಿಂದಲೂ ಸಲಹೆ ಪಡೆಯುವ ಅವಶ್ಯಕತೆ ನನಗಿಲ್ಲ ಹೀಗೆಂದು ಹಾಸನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸಚಿವ ರೇವಣ್ಣಗೆ ತಿರುಗೇಟು ನೀಡಿದ್ದಾರೆ. 

ಹಾಸನದ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಲಹೆ ಪಡೆದು ಈಗಿನ ಡಿಸಿ ಪ್ರಿಯಾಂಕ ಕೆಲಸ ಮಾಡುತ್ತಿದ್ದಾರೆಂಬ ರೇವಣ್ಣ ಆರೋಪಕ್ಕೆ ಡಿಸಿ ಪ್ರತಿಕ್ರಿಯಿಸಿದ್ದಾರೆ.  

ರೋಹಿಣಿಯವರು ನನ್ನ ಬ್ಯಾಚ್ ಮೇಟ್ ಅವರ ಭೇಟಿಯಲ್ಲಿ ವಿಶೇಷವೇನಿದೆ. ನನಗೆ ಯಾರ ಸಲಹೆಯನ್ನು ಪಡೆಯುವ ಅವಶ್ಯಕತೆ ಇಲ್ಲ ಎಂದಿರುವ ಅವರು ರೋಹಿಣಿ ಸಿಂಧೂರಿ ಎರಡು ದಿನ ತಮ್ಮೊಂದಿಗಿದ್ದರು ಎಂಬ ಆರೋಪ ಅಲ್ಲಗಳೆದಿದ್ದಾರೆ. 

ಪ್ರಿಯಾಂಕ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡದೆ ಹಾಸನದ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಭೇಟಿ ಮಾಡಿದ್ದರು. ಈ ಭೇಟಿ ಅಗತ್ಯವೇನಿತ್ತು ಎಂದು ರೇವಣ್ಣ ಪ್ರಶ್ನಿಸಿದ್ದರು. ಅಲ್ಲದೇ ಪ್ರಿಯಾಂಕ ಆಡಳಿತದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. 

ಈ ಸಚಿವ ರೇವಣ್ಣ ಹೇಳಿಕೆಯ ರೋಹಿಣಿ ಸಿಂಧೂರಿ ಭೇಟಿ ಮಾಡಿ ಸಲಹೆ ಪಡೆದಿರುವ ವಿಚಾರವನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಅಲ್ಲಗಳೆದಿದ್ದಾರೆ.