ಹಾಸನ(ಸೆ.10): ಜಿಲ್ಲಾಧಿಕಾರಿಗಳು ಶಾಸಕರು, ಸಚಿವರು, ಮಾಜಿ ಸಚಿವರನ್ನು ಗೌರವಿಸುವುದು ಸಾಮಾನ್ಯ. ಆದರೆ ಹಾಸನದ ಜಿಲ್ಲಾಧಿಕಾರಿ ವಿ.ಚೈತ್ರಾ ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣಗೆ ನೀವು ತಂದೆ ಸಮಾನ, ನಾನು ನಿಮ್ಮ ಮಗಳಂತೆ ಎಂದು ಹೇಳುವ ಮೂಲಕ ಹೆಚ್ಚಿನ ವಿಧೇಯತೆ ತೋರಿದ್ದಾರೆ.
ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಜೆಡಿಎಸ್ ಡಿಸಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದೆ. ಧರಣಿ ವೇಳೆ ಸರ್ಕಾರಕ್ಕೆ ಡಿಸಿ ಮೂಲಕ ಹೆಚ್ ಡಿ ರೇವಣ್ಣ ಮನವಿ ಪತ್ರ ಸಲ್ಲಿಸಿದರು. ಮನವಿ ಸ್ವೀಕರಿಸಿದ ನಂತರ ಒಂದು ರೀತಿ ಗದ್ಗದಿತರಾದ ರೀತಿಯಲ್ಲಿ ಮಾತನಾಡಿದ ಡಿಸಿ ಚೈತ್ರಾ, ನೀವು ನನಗೆ ತಂದೆ ಸಮಾನ. ನಾನು ನಿಮ್ಮ ಮಗಳ ಇದ್ದಹಾಗೇ, ಇದು ನನ್ನ ಮನವಿ. ನಿಮ್ಮ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇನೆ ಎಂದು ಹೇಳಿದರು.
