ಹಾಸನದ ಚನ್ನಪಟ್ಟಣದ ನರ್ಸ್ ನಂಜಮ್ಮ ಅವರನ್ನ ಒಂದೂವರೆ ವರ್ಷದ ಹಿಂದೆ ಕೊಲೆ ಮಾಡಿರುವುದಾಗಿ ಹೇಳಿದ್ದಾಳೆ. ರೂಪಾಳ ಮನೆಯನ್ನ ಭೋಗ್ಯಕ್ಕೆ ಪಡೆದು ವಾಸಿಸುತ್ತಿದ್ದ ನಂಜಮ್ಮನನ್ನ ಕೊಲೆಗೈದು ಮೈಮೇಲಿದ್ದ 150 ಗ್ರಾಂ ಚಿನ್ನಾಭರಣಗಳನ್ನು ದೋಚಲಾಗಿತ್ತು. 65 ವರ್ಷದ ನರ್ಸ್​ ನಂಜಮ್ಮ ಮನೆಯವರೊಂದಿಗೆ ಮುನಿಸಿಕೊಂಡು ​ಒಂಟಿಯಾಗಿ ಬದುಕುತ್ತಿದ್ದರು. ಒಂದು ವರ್ಷದ ಹಿಂದೆ ಮನೆಯೊಳಗೆ ಇದ್ದಕ್ಕಿದ್ದಂತೆ ಸಾವಿಗೀಡಾಗಿದ್ದರು. ನಂಜಮ್ಮರಿಗೆ ಲೋ ಬಿಪಿ ಇದ್ದ ಕಾರಣ ಸಹಜವಾಗಿ ಸಾವಿಗೀಡಾಗಿರಬಹುದು ಅಂತಾ ಮನೆಯವರು ಕೂಡ ಸುಮ್ಮನಾಗಿದ್ದರು.

ಹಾಸನ(ಅ.28): ಹಾಸನದ ದಂಡುಪಾಳ್ಯ ಗ್ಯಾಂಗ್​ 3 ಕೊಲೆಗಳನ್ನು ಮಾಡಿ ರಾಜ್ಯದ ಜನ ಬೆಚ್ಚಿಬೀಳುವಂತೆ ಮಾಡಿತ್ತು. ಆದರೆ, ಆ ಲೇಡಿ ಕಿಲ್ಲರ್ಸ್​ ಗ್ಯಾಂಗ್​ ಮತ್ತೊಂದು ಶಾಕ್​ ನೀಡಿದೆ. ಆ ಗ್ಯಾಂಗ್​ ಮಾಡಿದ್ದು ಮೂರಲ್ಲ, ನಾಲ್ಕು ಕೊಲೆ ಎನ್ನುವ ರಹಸ್ಯ ತನಿಖೆಯಲ್ಲಿ ಬಯಲಾಗಿದೆ. ಗ್ಯಾಂಗ್ ಲೀಡರ್​ ರೂಪಾ ಮತ್ತೊಂದು ಮಹಿಳೆಯನ್ನು ಕೊಲೆ ಮಾಡಿರುವ ಸ್ಫೋಟಕ ಮಾಹಿತಿಯನ್ನ ತನಿಖೆ ವೇಳೆ ಒಪ್ಪಿಕೊಂಡಿದ್ದಾಳೆ.