ಪ್ರತಿ ವಾರ ಕೆರೆಗಳ ಬಳಿ ಸಭೆ ಮಾಡುತ್ತಿರುವ ಹಿರಿಯ ನಾಗರಿಕರು ಮುಂದಿನ ಜನಾಂಗಕ್ಕೆ ಕೆರೆಗಳನ್ನ ಉಳಿಸಕೊಡಬೇಕು ಎಂಬ ನಿಲುವು ತೊಟ್ಟಿದ್ದಾರೆ.

ಹಾಸನ(ಸೆ.03): ನಗರದಲ್ಲಿ ಕಾಣೆಯಾಗುತ್ತಿರುವ ಕೆರೆಗಳಿಗಾಗಿ ಹಿರಿಯ ನಾಗರಿಕರ ವೇದಿಕೆ ಹೋರಾಟ ಆರಂಭಿಸಿದೆ. ಹಾಸನ ನಗರದ ಪ್ರಮುಖ ಕೆರೆಗಳಾದ ಚನ್ನಪಟ್ಟಣ ಕೆರೆ, ಸತ್ಯಮಂಗಳ ಕೆರೆ ಸೇರಿದಂತೆ ನಗರದ ಸುತ್ತಮುತ್ತವಿದ್ದ 18 ಕೆರೆಗಳು ಇದೀಗ ಮಾಯವಾಗಿದೆ. ಮುಖ್ಯವಾಗಿ ಚನ್ನಪಟ್ಣಣದ ಕೆರೆ ಮೇಲೆ ಬೃಹತ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣವಾದ ನಂತರ ಆ ಕೆರೆಯೇ ಮುಚ್ಚಿಹೋಗಿರುವುದು ಇದೀಗ ಇತಿಹಾಸ.

ಪಟ್ಟಣದ ಎಲ್ಲಾ ಕೆರೆಗಳು ಒಂದರ ಹಿಂದೆ ಒಂದರಂತೆ ಕಾಣೆಯಾಗುತ್ತಿದ್ದು, ಕ್ರಮೇಣವಾಗಿ ನಗರದಲ್ಲಿ ಅಂತರ್ಜಲ ಕಡಿಮೆಯಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ಹಾಸನ ನಗರದ ಹಿರಿಯ ನಾಗರಿಕರ ವೇದಿಕೆ, ಕೆರೆಗಳ ಉಳಿವಿಗಾಗಿ ಪಣ ತೊಟ್ಟಿದೆ. ಪ್ರತಿ ವಾರ ಕೆರೆಗಳ ಬಳಿ ಸಭೆ ಮಾಡುತ್ತಿರುವ ಹಿರಿಯ ನಾಗರಿಕರು ಮುಂದಿನ ಜನಾಂಗಕ್ಕೆ ಕೆರೆಗಳನ್ನ ಉಳಿಸಕೊಡಬೇಕು ಎಂಬ ನಿಲುವು ತೊಟ್ಟಿದ್ದಾರೆ.

ಇದಕ್ಕಾಗಿ ಕೆಲ ತಿಂಗಳಿನಿಂದ ಸತತ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕು. ಸಿಎಂ ಸಿದ್ದರಾಮಯ್ಯ ಅವರು ಕೆರೆಗಳನ್ನು ಉಳಿಸುವುದಕ್ಕೆ ಮುಂದಾಗಬೇಕು ಅನ್ನುವುದು ಹಿರಿಯರ ಆಶಯ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಹಿರಿಯರ ವೇದಿಕೆ ತೀರ್ಮಾನಿಸಿದೆ.ಈ ಸಂದರ್ಭದಲ್ಲಿ ಹಾಜರಿದ್ದ ಹಿರಿಯರ ಹೋರಾಟಕ್ಕೆ ಬಿಗ್ ಬಾಸ್ ವಿನ್ನರ್ ಪ್ರಥಮ್ ಕೂಡ ಕೈಜೋಡಿಸಿ ಬೆಂಬಲ ನೀಡಿದರು.