ಫರಿದಾಬಾದ್ ಜಿಲ್ಲೆಯ ಜಮ್ಮಿಕುಂಟಾ ಗ್ರಾಮ ನಿತ್ಯವೂ ರಾಷ್ಟ್ರಗೀತೆ ಮೇಳೈಸುವ ಗ್ರಾಮ.

ಫರಿದಾಬಾದ್(ಜ.06): ಈ ಗ್ರಾಮದಲ್ಲಿ ನಿತ್ಯ ಬೆಳಗಾದರೆ ರಾಷ್ಟ್ರಗೀತೆಯ ಝೇಂಕಾರ ಮೊಳಗುತ್ತದೆ. ಮುಂಜಾನೆ 8 ಗಂಟೆಗೆ ಹಳ್ಳಿಯ 5 ಸಾವಿರ ಜನ 'ಜನಗಣಮನ' ಹಾಡುತ್ತಾರೆ.

ರಾಷ್ಟ್ರಗೀತೆ ಹಾಡುವುದಕ್ಕಾಗಿಯೆ ಗ್ರಾಮದಾದ್ಯಂತ 20 ಲೌಡ್' ಸ್ಪೀಕರ್'ಗಳನ್ನು ಅಳವಡಿಸಲಾಗಿದೆ. ಜೊತೆಗೆ 20 ಸಿಸಿ ಟಿವಿಗಳು ಕೂಡ ಇವೆ. ಫರಿದಾಬಾದ್ ಜಿಲ್ಲೆಯ ಜಮ್ಮಿಕುಂಟಾ ಗ್ರಾಮ ನಿತ್ಯವೂ ರಾಷ್ಟ್ರಗೀತೆ ಮೇಳೈಸುವ ಗ್ರಾಮ. ಇದೇ ಮೊದಲ ಬಾರಿಗೆ ಹರ್ಯಾಣದ ಗ್ರಾಮವೊಂದು ರಾಷ್ಟ್ರಗೀತೆ ಹಾಡಲು ಲೌಡ್ ಸ್ಪೀಕರ್ ಸೌಲಭ್ಯ ಹೊಂದಿದ್ದು, ಭಾರತದಲ್ಲಿ ಈ ರೀತಿ ಸೌಲಭ್ಯ ಹೊಂದಿರುವ ಎರಡನೇ ಗ್ರಾಮವಾಗಿರುವುದು ಭಕನ್'ಪುರ್.

ಈ ವ್ಯವಸ್ಥೆ ಜಾರಿಗೊಳಿಸುವುದಕ್ಕಾಗಿಯೇ ಗ್ರಾಮದ ಮುಖ್ಯಸ್ಥರಾದ ಸಚಿನ್ 8 ಲಕ್ಷ ರೂ. ಹಣ ವ್ಯಯಿಸಿದ್ದು, ತಮ್ಮ ಮನೆಯಿಂದಲೇ ಧ್ವನಿವರ್ಧಕ ಹಾಗೂ ಸಿಸಿಟಿವಿ ಕಂಟ್ರೋಲ್ ಹೊಂದಿದ್ದು, ಯಾರೊಬ್ಬರೂ ರಾಷ್ಟ್ರಗೀತೆ ಹಾಡುವುದನ್ನು ತಪ್ಪಿಸಿಕೊಳ್ಳದಂತೆ ಮಾಡುವುದು ಈ ಉದ್ದೇಶವಾಗಿದೆ' ಎನ್ನುತ್ತಾರೆ.