ನವದೆಹಲಿ : ಹರ್ಯಾಣ ಮೂಲದ ಹಾಡುಗಾರ್ತಿಯೋರ್ವಳನ್ನು ಸರ್ಕಾರಿ ಅಧಿಕಾರಿಯೋರ್ವರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. 

2016ರಲ್ಲಿ ನೋಟು ಅಮಾನ್ಯೀಕರಣವಾದ ಸಂದರ್ಭದಲ್ಲಿ ಒಟ್ಟು 60 ಲಕ್ಷ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಪೊಲೀಸರು ಬಂಧಿಸಿದ್ದಾರೆ. 

ಪ್ರಧಾನಿ ಹೆಸರಲ್ಲಿ ನಕಲಿ ದಾಖಲೆ : ಹೈಕೋರ್ಟ್‌ನಲ್ಲಿ ಕೆಲಸಕ್ಕೆ ಅರ್ಜಿ!

ಬಂಧಿತ ಮಹಿಳೆಯನ್ನು ಶಿಖಾ ರಾಘವ್ ಎನ್ನಲಾಗಿದ್ದು, ಕಳೆದ 2 ವರ್ಷಗಳಿಂದಲೂ ಕೂಡ ಈಕೆಯ ಬಂಧನಕ್ಕಾಗಿ ಶೋಧ ಕಾರ್ಯ ನಡೆಸಿ, ಕೊನೆಗೂ ಅರೆಸ್ಟ್ ಮಾಡಲಾಗಿದೆ. 

ಹರ್ಯಾಣದಲ್ಲಿ ಆಕೆ ನೆಲೆಸಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ತೆರಳಿದ ಪೊಲೀಸರು ಆಕೆಯನ್ನು ಬಂಧಿಸಿ ದಿಲ್ಲಿಗೆ ಕರೆತರಲಾಗಿದೆ ಎಂದು ಡಿಸಿಪಿ ನೂಪುರ್ ಪ್ರಸಾದ್ ಹೇಳಿದ್ದಾರೆ. 

ಅಲ್ಲದೇ ಆಕೆಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು ಹಣ ವಸೂಲಿಯ ಯತ್ನ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.