ಹರ್ಯಾಣ[ಜು.23]: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದ್ದು, ಇದು ನೋಡುಗರನ್ನು ಅಚ್ಚರಿಗೀಡು ಮಾಡಿದೆ. ಭಾರೀ ಮಳೆಯಿಂದ ನೀರು ತುಂಬಿಕೊಂಡ ಪರಿಣಾಮ ರಸ್ತೆಯಲ್ಲಿ ನಡೆದಾಡುವುದೂ ಕಷ್ಟಕರವೆಂಬ ನಿರ್ಮಾಣವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಪುಟ್ಟ ಹುಡುಗಿಯೊಬ್ಬಳು ನೀರಿನಿಂದಾವೃತವಾದ ರಸ್ತೆಯಲ್ಲಿ ನಡೆದಾಡುತ್ತಾ ಪತ್ರಕರ್ತೆಯಂತೆ ರಿಪೋರ್ಟಿಂಗ್ ಮಾಡಿದ್ದಾಳೆ.

ಟ್ವಿಟರ್ ನಲ್ಲಿ ಈ ಬಾಲಕಿಯ ವಿಡಿಯೋ ವೈರಲ್ ಆಗುತ್ತಿದ್ದು, ನೋಡುಗರು ಬಾಲಕಿಗೆ ಪ್ರಶಂಸೆಯ ಮಳೆಗೈದಿದ್ದಾರೆ. ಈ ವಿಡಿಯೋವನ್ನು ಚಿಗುರ್ ಪ್ರಶಾಂತ್ ಎಂಬಾತ ಅಪ್ಲೋಡ್ ಮಾಡಿದ್ದು, ವಿಡಿಯೋದಲ್ಲಿ ಬಾಲಕಿ ಹರ್ಯಾಣದ ಕುರುಕ್ಷೇತ್ರ ಏರಿಯಾದ ಸ್ಥಿತಿ ಹೇಗಿದೆ ಎಂಬುವುದನ್ನು ವಿವರಿಸುತ್ತಿದ್ದಾಳೆ.

ವಿಡಿಯೋ ಶೇರ್ ಮಾಡಿಕೊಂಡಿರುವ ಚಿಗುರ್ 'ಹರ್ಯಾಣದ ಓರ್ವ ವಿದ್ಯಾರ್ಥಿನಿ ಕುರುಕ್ಷೇತ್ರದಲ್ಲಿ ಸುರಿದ ಭಾರೀ ಮಳೆಗೆ ಬ್ಲಾಕ್ ಆದ ರಸ್ತೆಯ ರಿಪೋರ್ಟಿಂಗ್ ಮಾಡುತ್ತಿದ್ದಾಳೆ. ಈ ಬಾಲಕಿಯ ಧ್ವನಿ ಸಿಎಂಗೆ ತಲುಪುತ್ತದೆ ಎಂಬ ಆಶಾಭಾವನೆ ನನ್ನದು. ಈಕೆ ಟಿವಿ ಪತ್ರಕರ್ತೆಯಂತೆಯೇ ವರದಿ ಮಾಡಿದ್ದಾಳೆ ಎಂಬುವುದರಲ್ಲಿ ಅನುಮಾನವಿಲ್ಲ' ಎಂದೂ ಬರೆದುಕೊಂಡಿದ್ದಾರೆ.