ತಮ್ಮ ಕಾರಿಗೆ ಆ್ಯಂಬುಲೆನ್ಸ್ ತಾಗಿತೆಂದು ಕೋಪಗೊಂಡ ಬಿಜೆಪಿ ನಾಯಕರೊಬ್ಬರು ಆ್ಯಂಬುಲೆನ್ಸನ್ನು 30 ಕ್ಕೂ ಹೆಚ್ಚು ನಿಮಿಷ ತಡೆಗಟ್ಟಿದ ಕಾರಣ ಅದರಲ್ಲಿದ್ದ ರೋಗಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಹರ್ಯಾಣ (ಆ.07): ತಮ್ಮ ಕಾರಿಗೆ ಆ್ಯಂಬುಲೆನ್ಸ್ ತಾಗಿತೆಂದು ಕೋಪಗೊಂಡ ಬಿಜೆಪಿ ನಾಯಕರೊಬ್ಬರು ಆ್ಯಂಬುಲೆನ್ಸನ್ನು 30 ಕ್ಕೂ ಹೆಚ್ಚು ನಿಮಿಷ ತಡೆಗಟ್ಟಿದ ಕಾರಣ ಅದರಲ್ಲಿದ್ದ ರೋಗಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ನವೀನ್ ಕುಮಾರ್ ಎಂಬುವವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ದಾರಿಯಲ್ಲಿ ಫತೇಹಾಬಾದ್ ಬಿಜೆಪಿ ಕೌನ್ಸಲರ್ ದರ್ಶನ್ ನಾಗಪಾಲ್’ ಕಾರಿಗೆ ಅಂಬುಲೆನ್ಸ್ ತಾಗಿದೆ. ಕೋಪಗೊಂಡ ಬಿಜೆಪಿ ಕೌನ್ಸಲರ್ ಅಂಬುಲೆನ್ಸನ್ನು ಹೋಗುವುದಕ್ಕೆ ಬಿಡದೇ ಅರ್ಧ ಗಂಟೆಗೂ ಹೆಚ್ಚು ಹೊತ್ತು ತಡೆ ಹಿಡಿದಿದ್ದಾರೆ. ಡ್ರೈವರ್ ಬಳಿ ಪರಿಹಾರ ಕೊಡುವಂತೆ ಸತಾಯಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ರೋಗಿಯನ್ನು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗದೇ ಅಲ್ಲಿಯೇ ಮೃತಪಟ್ಟಿದ್ದಾರೆ ಎಂದು ಮೃತರ ಸಂಬಂಧಿ ಆರೋಪಿಸಿದ್ದಾರೆ.
ಆದರೆ ದರ್ಶನ್ ನಾಗಪಾಲ್ ಈ ಆರೋಪವನ್ನು ತಳ್ಳಿ ಹಾಕಿದ್ದು, ಆಂಬುಲೆನ್ಸ್ ಆಸ್ಪತ್ರೆಗೆ ತೆರಳಿದ ಮೇಲೆ ಡ್ರೈವರ್ ಜೊತೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.
ಪೊಲೀಸರು ತನಿಖೆ ನಡೆಸುತ್ತಿದ್ದು, ಇನ್ನೂ ಪ್ರಕರಣ ದಾಖಲಾಗಿಲ್ಲ.
ಸಾಂದರ್ಭಿಕ ಚಿತ್ರ
