ಮೊಯ್ಲಿ ಪುತ್ರನಿಗೆ ಕೆಪಿಸಿಸಿ ನೋಟಿಸ್..!

First Published 17, Mar 2018, 9:40 PM IST
Harsha Moily Get Notice From KPCC
Highlights

"ಕಾಂಗ್ರೆಸ್ ಟಿಕೆಟ್ ಹಂಚಿಕೆ ನಿಯಂತ್ರಿಸುತ್ತಿರುವ ರಸ್ತೆ ಕಾಂಟ್ರಾಕ್ಟರ್ಸ್" "ಕಾಂಟ್ರಾಕ್ಟರ್ಸ್ ಜತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇರನಂಟು" "ರಾಜಕಾರಣದಲ್ಲಿ ಕಾಂಗ್ರೆಸ್ ನಿಂದ ಹಣ ಸಮಸ್ಯೆ ನಿವಾರಣೆ ಆಗಬೇಕು" ಎಂದು ಟ್ವೀಟ್ ಪೋಸ್ಟ್ ಮಾಡಲಾಗಿತ್ತು.

ಬೆಂಗಳೂರು(ಮಾ.17): ಟ್ವಿಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರಪ್ಪ ಮೊಯ್ಲಿ ಪುತ್ರ ಹರ್ಷಾ ಮೊಯ್ಲಿಗೆ ಕೆಪಿಸಿಸಿಯಿಂದ ನೋಟಿಸ್ ನೀಡಲಾಗಿದೆ.

ತಮ್ಮ ಟ್ವೀಟ್ ಕುರಿತು ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದ್ದು, ವೀರಪ್ಪ ಮೊಯ್ಲಿಗೆ ನೋಟಿಸ್ ನೀಡಲಾಗಿಲ್ಲ. ಗುರುವಾರ ಸಂಜೆ ವೀರಪ್ಪ ಮೊಯ್ಲಿ, ಹರ್ಷಾ ಟ್ವಿಟರ್ ನಲ್ಲಿ  "ಕಾಂಗ್ರೆಸ್ ಟಿಕೆಟ್ ಹಂಚಿಕೆ ನಿಯಂತ್ರಿಸುತ್ತಿರುವ ರಸ್ತೆ ಕಾಂಟ್ರಾಕ್ಟರ್ಸ್" "ಕಾಂಟ್ರಾಕ್ಟರ್ಸ್ ಜತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇರನಂಟು" "ರಾಜಕಾರಣದಲ್ಲಿ ಕಾಂಗ್ರೆಸ್ ನಿಂದ ಹಣ ಸಮಸ್ಯೆ ನಿವಾರಣೆ ಆಗಬೇಕು" ಎಂದು ಟ್ವೀಟ್ ಪೋಸ್ಟ್ ಮಾಡಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ  ಮೊಯ್ಲಿ "ಟ್ವೀಟ್ ಮಾಡಿದ್ದು ನನ್ನ ಪುತ್ರ..! ತಾವಲ್ಲ  ಎಂದು  ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್'ಗೆ ಮಾಹಿತಿ ನೀಡಿದ್ದರು. ಹರ್ಷಾ ಮೊಯ್ಲಿಗೆ ನೋಟಿಸ್ ನೀಡಿ ಎಂದು  ಕೆ.ಸಿ.ವೇಣುಗೋಪಾಲ್ ಸೂಚಿಸಿದ್ದರು.

loader