ಅಮೆರಿಕಕ್ಕೆ ಹೊಸ ರಾಯಭಾರಿ ನೇಮಿಸಿದ ಭಾರತ ಸರ್ಕಾರ| ಹರ್ಷವರ್ಧನ್ ಶ್ರಿಂಗ್ಲಾ ಅಮೆರಿಕಕ್ಕೆ ಭಾರತದ ಹೊಸ ರಾಯಭಾರಿ| 1984ರ ಬ್ಯಾಚ್ ನ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿ| ನವತೇಜ್ ಸರ್ನಾ ಅವರ ಅಧಿಕಾರವಧಿ ಮುಗಿದ ಹಿನ್ನೆಲೆ

ನವದೆಹಲಿ(ಡಿ.20): ಅಮೆರಿಕದ ಮುಂದಿನ ಭಾರತದ ರಾಯಬಾರಿಯಾಗಿ ಹರ್ಷವರ್ಧನ್ ಶ್ರಿಂಗ್ಲಾ ಅವರನ್ನು ಇಂದು ಕೇಂದ್ರ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನವತೇಜ್ ಸರ್ನಾ ಅವರ ಅಧಿಕಾರವಧಿ ಮುಗಿದ ಹಿನ್ನೆಲೆಯಲ್ಲಿ, 1984ರ ಬ್ಯಾಚ್ನ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿ ಹರ್ಷವರ್ಧನ್ ಶ್ರಿಂಗ್ಲಾ ಅವರನ್ನು ಅಮೆರಿಕಾದ ಮುಂದಿನ ರಾಯಬಾರಿಯಾಗಿ ನೇಮಕ ಮಾಡಲಾಗಿದೆ.

ಸದ್ಯದಲ್ಲಿ ಹರ್ಷವರ್ಧನ್ ಶ್ರೀಂಗ್ಲಾ ಕಾರ್ಯಾರಂಭಿಸುವ ಸಾಧ್ಯತೆ ಇದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

ಶ್ರೀಂಗ್ಲಾ ಪ್ರಸ್ತುತ ಬಾಂಗ್ಲಾದೇಶದ ಹೈಕಮೀಷನರ್ ಆಗಿದ್ದಾರೆ. ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಸಮಿತಿ ಮಹಾನಿರ್ದೇಶಕ ಗಂಗೂಲಿ ದಾಸ್ ಅವರನ್ನು ಬಾಂಗ್ಲಾದೇಶದ ನೂತನ ಹೈಕಮೀಷನರ್ ಆಗಿ ನೇಮಕ ಮಾಡಲಾಗಿದೆ.