ಹ್ಯಾರಿಸ್ ಬೆಂಬಲಿಗನಿಂದ ವ್ಯಕ್ತಿ ಮೇಲೆ ಹಲ್ಲೆ ..?

Harris Close Aide Attack A Man
Highlights

ವಿದ್ವತ್ ಮೇಲಿನ ನಲಪಾಡ್ ಹಲ್ಲೆ ಪ್ರಕರಣ ಹಸಿ ಆಗಿರುವಾಗಲೇ ಶಾಸಕ ಎನ್.ಎ.ಹ್ಯಾರಿಸ್ ಅವರ ಬೆಂಬಲಿಗ ಮೋವೀಸ್ ಎಂಬಾತ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪ ಕೇಳಿ ಬಂದಿದೆ.

ಬೆಂಗಳೂರು: ವಿದ್ವತ್ ಮೇಲಿನ ನಲಪಾಡ್ ಹಲ್ಲೆ ಪ್ರಕರಣ ಹಸಿ ಆಗಿರುವಾಗಲೇ ಶಾಸಕ ಎನ್.ಎ.ಹ್ಯಾರಿಸ್ ಅವರ ಬೆಂಬಲಿಗ ಮೋವೀಸ್ ಎಂಬಾತ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪ ಕೇಳಿ ಬಂದಿದೆ. ರುದ್ರಪ್ಪ ಗಾರ್ಡನ್ ನಿವಾಸಿ ದೀಲಿಪ್ ಎಂಬುವರು ಹಲ್ಲೆಗೊಳಗಾಗಿದ್ದು, ಈ ಸಂಬಂಧ ವಿವೇಕ್ ನಗರ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿಲೀಪ್ ಸ್ನೇಹಿತರಿಗೆ ಹ್ಯಾರಿಸ್ ಬೆಂಬಲಿಗ ಎನ್ನಲಾದ ಮೋವೀಸ್ ಹಲ್ಲೆ ನಡೆಸಿದ್ದ. ಇದನ್ನು ದಿಲೀಪ್ ಪ್ರಶ್ನಿಸಿದ್ದಕ್ಕೆ ಅವರ ಮೇಲೂ ಕೂಡ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ದೂರು ದಾಖಲಿಸಲು ಹೋದರೆ ಪೊಲೀಸರಿಗೆ ಮೊದಲು ದೂರು ಪಡೆದಿಲ್ಲ. ದಿಲೀಪ್ ಪೋಷಕರು ಹಾಗೂ ಸಾರ್ವಜನಿಕರು ವಿವೇಕ್‌ನಗರ ಠಾಣೆ  ಎದುರು ಜಮಾಯಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ಬಳಿಕ ಪೊಲೀಸರು ದೂರು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಯಾವ ಕಾರಣಕ್ಕೆ ಗಲಾಟೆಯಾಗಿದೆ ಎಂಬುದು ತಿಳಿದಿಲ್ಲ. ಎರಡು ಕಡೆಯಿಂದ ದೂರು-ಪ್ರತಿ ದೂರು ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

loader