ಸಿನಿಮೀಯ ಘಟನೆಯೊಂದರಲ್ಲಿ ಪಂಜಾಬ್‌'ನ ನಬಾ ಜೈಲಿಗೆ ಇಂದು ಬೆಳಗ್ಗೆ ಪೊಲೀಸ್‌ ಸಮವಸ್ತ್ರ ಧರಿಸಿಕೊಂಡು ಬಂದ ಐವರು ಶಸ್ತ್ರಧಾರಿ ಆಗಂತುಕರು ಐವರು ಖಲಿಸ್ತಾನ್‌ ಉಗ್ರರರನ್ನು ಜೈಲಿನಿಂದ ಬಂಧಮುಕ್ತಗೊಳಿಸಿ ಕರೆದೊಯ್ದಿದ್ದರು.
ನವದೆಹಲಿ (ನ.27): ಪಂಜಾಬ್’ನ ನಭಾ ಜೈಲ್ನಿಂದ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದ ಖಾಲಿಸ್ತಾನಿ ಉಗ್ರ ಹರ್ಮಿಂದರ್’ನನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಸಿಟಿವಿ ದೃಶ್ಯಾವಳಿ ಆಧರಿಸಿ ಉಗ್ರನನ್ನು ಪರಾರಿಯಾದ 10 ಗಂಟೆಯಲ್ಲೇ ಪೊಲೀಸರು ಬಂಧಿಸಿದ್ದಾರೆ,
ಸಿನಿಮೀಯ ಘಟನೆಯೊಂದರಲ್ಲಿ ಪಂಜಾಬ್'ನ ನಬಾ ಜೈಲಿಗೆ ಇಂದು ಬೆಳಗ್ಗೆ ಪೊಲೀಸ್ ಸಮವಸ್ತ್ರ ಧರಿಸಿಕೊಂಡು ಬಂದ ಐವರು ಶಸ್ತ್ರಧಾರಿ ಆಗಂತುಕರು ಐವರು ಖಲಿಸ್ತಾನ್ ಉಗ್ರರರನ್ನು ಜೈಲಿನಿಂದ ಬಂಧಮುಕ್ತಗೊಳಿಸಿ ಕರೆದೊಯ್ದಿದ್ದರು.
ಖಲಿಸ್ತಾನ್ ಲಿಬರೇಶನ್ ಉಗ್ರ ಸಂಘಟನೆಗೆ ಸೇರಿದ ಹರ್ಮಿಂದರ್ ಸಿಂಗ್ ಮಿಂಟೂ ಮತ್ತು ಐವರು ಗ್ಯಾಂಗ್ ಸ್ಟರ್ಗಳು ಉಗ್ರ ಚಟುವಟಿಗಳ ಆರೋಪದಲ್ಲಿ 2014 ರಲ್ಲಿ ಪಂಜಾಬ್ ಪೊಲೀಸರು ಬಂಧಿಸಿದ್ದರು. ಘಟನೆಯ ಬಳಿಕ ಪಂಜಾಬ್'ನಾದ್ಯಂತ ಹೈ ಅಲರ್ಟ್ ಘೋಷಿಸಲಾಗಿತ್ತು.
ಟೊಯೋಟಾ ಫಾರ್ಚುನರ್,ಮಾರುತಿ ಸ್ವಿಫ್ಟ್ ಮತ್ತು ಹ್ಯುಂಡಾಯಿ ವೆರ್ನಾ ಕಾರುಗಳಲ್ಲಿ ಉಗ್ರರು ಪರಾರಿಯಾಗಿದ್ದರು.
