ಪಬ್ಲಿಕ್ ನ್ಯೂಸ್‌ಗೆ ಮೊದಲ ಸಿಖ್ ಆ್ಯಂಕರ್!

Harmeet Singh: First Sikh to become a news anchor in Pakistan
Highlights

ಪಬ್ಲಿಕ್ ನ್ಯೂಸ್ ಗೆ ಮೊದಲ ಸಿಖ್ ಆ್ಯಂಕರ್

ಪಾಕಿಸ್ತಾನದ ಪಬ್ಲಿಕ್ ನ್ಯೂಸ್ ನೇಮಕ

ಹರ್ಮೀತ್​ ಸಿಂಗ್​ ಪಾಕ್‌ನ ಮೊದಲ ಸಿಖ್ ಆ್ಯಂಕರ್

ಕರಾಚಿ(ಜು.1): ಪಾಕಿಸ್ತಾನ ಚಾನೆಲ್​ವೊಂದು ಸಿಖ್ ಸಮುದಾಯಕ್ಕೆ ಸೇರಿದ ಹರ್ಮೀತ್ ಸಿಂಗ್​ರನ್ನು ಆ್ಯಂಕರ್ ಆಗಿ ನೇಮಕ ಮಾಡಿದೆ. ಖೈಬರ್​ ಪ್ಯಾಂತ್ಯದ ನಿವಾಸಿಯಾಗಿರುವ ಹರ್ಮಿತ್ ಸಿಂಗ್ ಸದ್ಯ ಪಾಕಿಸ್ತಾನದ ಪಬ್ಲಿಕ್ ನ್ಯೂಸ್ ಚಾನೆಲ್​ ನಲ್ಲಿ ನಿರೂಪಕನಾಗಿ ಕೆಲಸ ಪ್ರಾರಂಭಿಸಿದ್ದಾರೆ.

ಹರ್ಮೀತ್​ ಸಿಂಗ್​ರನ್ನು ಸ್ವಾಗತ ಮಾಡುವ ವಿಡಿಯೋವನ್ನು ಚಾನೆಲ್​ನ ಅಧಿಕೃತ ಟ್ವಿಟರ್​ ಪೇಜ್​ನಲ್ಲಿ ಪೋಸ್ಟ್ ಮಾಡಿ "ಪಾಕಿಸ್ತಾನದ ಮೊದಲ ಸಿಖ್ ನ್ಯೂಸ್ ಆ್ಯಂಕರ್ ಹರ್ಮೀತ್​ ಸಿಂಗ್ " ಎಂದು ಕ್ಯಾಪ್ಷನ್ ನೀಡಿದ್ದಾರೆ.

ಹೊಸ ಜವಾಬ್ದಾರಿ ಕುರಿತಂತೆ ಮಾತನಾಡಿರುವ ಹರ್ಮೀತ್​ ಸಿಂಗ್, "ಪಾಕಿಸ್ತಾನದ ಮಾಧ್ಯಮದಲ್ಲಿ ಕೆಲಸ ಮಾಡಲು ಅತೀ ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ. ಜೊತೆಗೆ ಜಾತಿಯನ್ನು ಮುಂದಿಟ್ಟುಕೊಂಡು ಕೆಲಸ ಗಿಟ್ಟಿಸಿಲ್ಲ, ನನ್ನ ಕಠಿಣ ಪರಿಶ್ರಮದಿಂದ ಇದೆಲ್ಲಾ ಸಾಧ್ಯವಾಯಿತು" ಎಂದಿದ್ದಾರೆ.

ಹರ್ಮೀತ್​ ಆಯ್ಕೆಗೆ ಆತನ ಧ್ವನಿ ಮತ್ತು ಆಕರ್ಷಕ ವ್ಯಕ್ತಿತ್ವ ಕಾರಣವಾಯಿತು ಎಂದು ಪಬ್ಲಿಕ್ ನ್ಯೂಸ್​ನ ಮುಖ್ಯಸ್ಥ ಯೂಸುಫ್​ ಬೇಗ್ ಮಿರ್ಜಾ ಹೇಳಿದ್ದಾರೆ. ಇನ್ನು ಹರ್ಮೀತ್ ಸಿಂಗ್ ಕರಾಚಿಯ ಫೆಡರಲ್ ಉರ್ದು ವಿವಿಯಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ಶಿಕ್ಷಣ ಮುಗಿಸಿ ವರದಿಗಾರನಾಗಿ ವೃತ್ತಿ ಪ್ರಾರಂಭಿಸಿದ್ದರು. ಇತ್ತೀಚಿಗೆ ಮನ್​ಮೀತ್​ ಕೌರ್​ ಪಾಕ್ ಪ್ರಥಮ ಮಹಿಳಾ ಸಿಖ್​ ವರದಿಗಾರ್ತಿ ಆಗಿ ದೇಶದ ಗಮನ ಸೆಳೆದಿದ್ದಳು.

loader