ಟ್ವಿಟರ್’ನಲ್ಲಿ ನಿಂದನಾತ್ಮಕ ಟ್ವೀಟ್’ಗಳು, ಪೋಸ್ಟ್’ಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ಹಿರಿಯ ವಕೀಲ ಹರೀಶ್ ಸಾಳ್ವೆ ತಮ್ಮ ಟ್ವಿಟರ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ.
ನವದೆಹಲಿ (ಅ.05): ಟ್ವಿಟರ್’ನಲ್ಲಿ ನಿಂದನಾತ್ಮಕ ಟ್ವೀಟ್’ಗಳು, ಪೋಸ್ಟ್’ಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ಹಿರಿಯ ವಕೀಲ ಹರೀಶ್ ಸಾಳ್ವೆ ತಮ್ಮ ಟ್ವಿಟರ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ.
ನಿರಂತರವಾಗಿ ಟ್ವಿಟರ್’ನಲ್ಲಿ ಆಕ್ರಮಣಕಾರಿ ಪೋಸ್ಟ್’ಗಳು ಬರುತ್ತಿರುವುದರಿಂದ ಹರೀಶ್ ಸಾಳ್ವೆ ತಮ್ಮ ಟ್ವಿಟರ್ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಇನ್ನೊಬ್ಬ ಹಿರಿಯ ವಕೀಲ ಫಾಲಿ ನಾರಿಮನ್, ನಾನು ಟ್ವಿಟರ್ ಖಾತೆ, ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳನ್ನು ಹೊಂದಿಲ್ಲದೇ ಇರುವುದು ಒಳ್ಳೆಯದೇ ಆಯಿತು ಎಂದಿದ್ದಾರೆ.
