ಪತೇದಾರ್  ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಮಹಿಳೆಯೊಂದಿಗೆ  ಕಾಮಕ್ರೀಡೆಯಾಡುತ್ತಿರುವ ಸೆಕ್ಸ್ ಸಿಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನವದೆಹಲಿ (ನ.13): ಪತೇದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಮಹಿಳೆಯೊಂದಿಗೆ ಕಾಮಕ್ರೀಡೆಯಾಡುತ್ತಿರುವ ಸೆಕ್ಸ್ ಸಿಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹಾರ್ದಿಕ್ ಪಟೇಲ್ ಹೋಲುವ ವ್ಯಕ್ತಿ ಜೊತೆಗೆ ಮಹಿಳೆಯ ಜೊತೆ ಸರಸ ಸಲ್ಲಾಪ ಮಾಡುತ್ತಿರುವ ಸಿಡಿ ಎಲ್ಲಾ ಕಡೆ ಹರಿದಾಡುತ್ತಿದ್ದು, ಸೆಕ್ಸ್ ಸಿಡಿಯಲ್ಲಿರುವುದು ನಾನಲ್ಲ ಎಂದು ಹಾರ್ದಿಕ್ ಪಟೇಲ್ ಸ್ಪಷ್ಟನೆ ನೀಡಿದ್ದಾರೆ. ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕುತಂತ್ರ ನಡೆಸಿ ನನ್ನ ಮೇಲೆ ಆಪಾದನೆ ಮಾಡುತ್ತಿದೆ. ಸೆಕ್ಸ್ ಸಿಡಿ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಹಾರ್ದಿಕ್ ಪಟೇಲ್ ಆರೋಪಿಸಿದ್ದಾರೆ.

ಈ ರೀತಿ ಸಿಡಿ ಬಿಟ್ಟಿರುವುದು ಇದೇ ಮೊದಲಲ್ಲ. 2015 ರಲ್ಲೂ ಇದೇ ರೀತಿ ಸೆಕ್ಸ್ ಸಿಡಿ ಮೂಲಕವೇ ಅಪಪ್ರಚಾರ ಮಾಡಿದ್ದರು. ಪಟೇಲ್ ಸಮುದಾಯಕ್ಕೆ ಮೀಸಲಾತಿಗೆ ಹೋರಾಡುತ್ತಿದ್ದ ವೇಳೆ, ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಗೆ ಆಗ್ರಹಿಸುತ್ತಿದ್ದಾಗಲೂ ಷಡ್ಯಂತ್ರ ಮಾಡಲಾಗಿತ್ತು ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ.