Asianet Suvarna News Asianet Suvarna News

ಹಾರ್ದಿಕ್ ಪಟೇಲ್ ಗೆ 2 ವರ್ಷ ಜೈಲು

ಪಟೇಲ್ ಸಮುದಾಯದ ಹೋರಾಟದ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟೀದಾರ್ ಹೋರಾಟಗಾರ ಹಾರ್ದಿಕ್ ಪಟೇಲ್ ಗೆ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.    

Hardik Patel jailed for 2 years
Author
Bengaluru, First Published Jul 25, 2018, 1:28 PM IST

ಮೆಹಸಾನ :  2015ರಲ್ಲಿ ಪಟೇಲ್ ಸಮುದಾಯದ ಹೋರಾಟದ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟೀದಾರ್ ಹೋರಾಟಗಾರ ಹಾರ್ದಿಕ್ ಪಟೇಲ್ ಗೆ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.    

ಮೀಸಾಲಾತಿ ಹೋರಾಟದ ವೇಳೆ ಬಿಜೆಪಿ ಮುಖಂಡ  ರುಶಿಕೇಸ್ ಅವರ ಕಚೇರಿ ಮೇಲೆ ದಾಳಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ  ಶಿಕ್ಷೆ ವಿಧಿಸಲಾಗಿದೆ. 

ಈ ಪ್ರಕರಣ ಸಂಬಂಧ  ವಿಚಾರಣೆ ನಡೆಸಿದ ವಿಶ್ ನಗರ್ ಕೋರ್ಟ್  ಪಟೇಲ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ಗೆ 2 ವರ್ಷಗಳ ಕಾಲ ಜೈಲು ಶಿಕ್ಷೆಯೊಂದಿಗೆ 50 ಸಾವಿರ ದಂಡ ವಿಧಿಸಿದೆ. 

ಇವರೊಂದಿಗೆ  ಲಾಲ್ ಜಿತ್ ಪಟೇಲ್ ಮತ್ತು ಪಟೇಲ್ ಸಮುದಾಯದ ಹೋರಾಟಗಾರ ಅಂಬಾಲಾಲ್  ಪಟೇಲ್ ಗೂ ಕೂಡ 2 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ತಲಾ 50 ಸಾವಿರ ದಂಢ ವಿಧಿಸಲಾಗಿದೆ.   

2015ರ ಜುಲೈನಲ್ಲಿ ಮೀಸಲಾತಿಗಾಗಿ ಪಟೇಲ್ ಸಮುದಾಯ ಹೋರಾಟ ನಡೆಸುತ್ತಿದ್ದ ವೇಳೆ ವಿಶ್ ನಗರ್ ಶಾಸಕ ರಿಶಿಕೇಶ್ ಪಟೇಲ್ ಅವರ ಕಚೇರಿಗೆ ಹಾನಿ ಮಾಡಿದ್ದಾಗಿ ಪ್ರಕರಣ ದಾಖಲಿಸಲಾಗಿತ್ತು. ಪಟೇಲ್ ಸಮುದಾಯಕ್ಕೆ ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸೂಕ್ತ ಪ್ರಮಾಣದಲ್ಲಿ ಮೀಸಲಾತಿ ಒದಗಿಸಬೇಕು ಎಂದು ಹೋರಾಟ ನಡೆಸುತ್ತಿದ್ದ ವೇಳೆ ಈ ಕತ್ಯ ನಡೆದಿತ್ತು. 

Follow Us:
Download App:
  • android
  • ios