ನಿರಂತರ ಉಪವಾಸ ನಡೆಸುತ್ತಿರುವ ಹಾರ್ದಿಕ್ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ. ಅವರ ಕಿಡ್ನಿ, ಹೃದಯ ಮತ್ತು ಇತರ ಅಂಗಾಂಗಗಳಿಗೆ ಸೋಂಕು ತಗುಲಿದೆ ಎಂದು ಸರ್ಕಾರಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಅಹಮದಾಬಾದ್: ಪಟೇಲ್ ಸಮುದಾಯಕ್ಕೆ ಮೀಸಲಾತಿ ಸೇರಿ ಇತರ ಬೇಡಿಕೆಗಳನ್ನು ಈಡೇರಿ ಸುವಂತೆ ಆಗ್ರಹಿಸಿ ಕಳೆದ 14 ದಿನಗಳಿಂದ ಉಪ ವಾಸ ಸತ್ಯಾಗ್ರಹ ನಡೆಸುತ್ತಿರುವ ಪಾಟಿದಾರ್ ಅನಾಮತ್ ಆಂದೋಲನದ ಸಮಿತಿ(ಪಾಸ್) ಮುಖಂಡ ಹಾರ್ದಿಕ್ ಪಟೇಲ್ ತೀವ್ರ ಅಸ್ವಸ್ಥರಾಗಿದ್ದಾರೆ.
ಹೀಗಾಗಿ ಅವರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿರಂತರ ಉಪವಾಸದಿಂದ ಹಾರ್ದಿಕ್ ಕಿಡ್ನಿ, ಹೃದಯ ಮತ್ತು ಇತರ ಅಂಗಾಂ ಗಗಳಿಗೆ ಸೋಂಕು ತಗುಲಿದೆ ಎಂದು ಸರ್ಕಾರಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಈ ನಡುವೆ, ಹಾರ್ದಿಕ್‌ಗೆ ಏನಾದರೂ ಆದರೆ, ಅದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ಪಾಸ್ ಎಚ್ಚರಿಸಿದೆ.

Last Updated 9, Sep 2018, 9:16 PM IST