ವಿಎಚ್’ಪಿ ಮುಖಂಡ ತೊಗಾಡಿಯಾರನ್ನು ಭೇಟಿಯಾದ ಹಾರ್ದಿಕ್

First Published 17, Jan 2018, 8:55 AM IST
Hardik Meet Praveen Togadiya
Highlights

ಪಾಟಿದಾರ್ ಸಮಾಜದ ಮುಖಂಡ ಹಾರ್ದಿಕ್ ಪಟೇಲ್ ಹಾಗೂ ಕಾಂಗ್ರೆಸ್ ಮುಖಂಡ ಅರ್ಜುನ್ ಮೋಧ್ವಾಡಿಯಾ ಅವರು, ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿರುವ ವಿಎಚ್‌ಪಿ ಮುಖಂಡ ಪ್ರವೀಣ್ ತೊಗಾಡಿಯಾರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿರುವುದು ಅನೇಕರ ಹುಬ್ಬೇರುವಂತೆ ಮಾಡಿದೆ.

ಅಹ್ಮದಾಬಾದ್: ಪಾಟಿದಾರ್ ಸಮಾಜದ ಮುಖಂಡ ಹಾರ್ದಿಕ್ ಪಟೇಲ್ ಹಾಗೂ ಕಾಂಗ್ರೆಸ್ ಮುಖಂಡ ಅರ್ಜುನ್ ಮೋಧ್ವಾಡಿಯಾ ಅವರು, ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿರುವ ವಿಎಚ್‌ಪಿ ಮುಖಂಡ ಪ್ರವೀಣ್ ತೊಗಾಡಿಯಾರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿರುವುದು ಅನೇಕರ ಹುಬ್ಬೇರುವಂತೆ ಮಾಡಿದೆ.

ತೊಗಾಡಿಯಾ ಅವರಿಗೂ ಬಿಜೆಪಿ ನಾಯಕರಾದ ನರೇಂದ್ರ ಮೋದಿ-ಅಮಿತ್ ಶಾ ಜೋಡಿಗೂ ಆಗಿಬರುವುದಿಲ್ಲ. ಈ ಹಿನ್ನೆಲೆಯಲ್ಲಿ ತೊಗಾಡಿಯಾ ನಾಪತ್ತೆ ಪ್ರಕರಣಕ್ಕೆ ಮಹತ್ವ ಬಂದಿತ್ತು. ಇದರ ಬೆನ್ನಲ್ಲೇ ವಿಎಚ್‌ಪಿಯ ಬದ್ಧ ವೈರಿಯಾಗಿರುವ ಕಾಂಗ್ರೆಸ್ ಮುಖಂಡರು ತೊಗಾಡಿಯಾರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

ವೈರಿಯ ವೈರಿ ಮಿತ್ರನೇ ಎಂಬ ಶಂಕೆ ಹುಟ್ಟು ಹಾಕಿದೆ. ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಹಾರ್ದಿಕ್ ಪಟೇಲ್, ‘ನಮ್ಮ ನಡುವೆ ಭಿನ್ನಾಭಿಪ್ರಾಯ ಏನೇ ಇರಬಹುದು. ಓರ್ವ ಮುಖಂಡನಿಗೆ ಆರೋಗ್ಯ ಸರಿಯಿಲ್ಲ ಎಂಬ ಸುದ್ದಿ ಹಿನ್ನೆಲೆಯಲ್ಲಿ ಮಾನವೀಯ ದೃಷ್ಟಿಯಿಂದ ಬಂದು ಭೇಟಿಯಾದೆ. ವಿಶೇಷ ಅರ್ಥ ಬೇಡ. ಆದರೆ ತೊಗಾಡಿಯಾ ನಾಪತ್ತೆ ಬಗ್ಗೆ ಏಕೆ ಬಿಜೆಪಿ ಮುಖಂಡರು ಚಕಾರವೆತ್ತುತ್ತಿಲ್ಲ?’ ಎಂದು ಪ್ರಶ್ನಿಸಿದರು.

loader