ಸಾಗರ ಕ್ಷೇತ್ರದಲ್ಲಿ ಯಾರಿಗೆ ಸಿಗುತ್ತೆ ಟಿಕೆಟ್? ಕಮಲ ಬಿಟ್ಟು ಕೈ ಹಿಡಿತಾರಾ ಹಾಲಪ್ಪ?

First Published 31, Mar 2018, 10:24 AM IST
Haratal Halappa Unpleasant with BSY
Highlights

ಸಾಗರ ಕ್ಷೇತ್ರದಲ್ಲಿ ಹರತಾಳು  ಹಾಲಪ್ಪ  ಹಾಗೂ ಬೇಳೂರು ಗೋಪಾಲಕೃಷ್ಣ ನಡುವೆ ಪೈಪೋಟಿ ಏರ್ಪಟ್ಟಿದೆ. ಯಾರಿಗೆ ಟಿಕೆಟ್ ಸಿಗುತ್ತೆ ಅನ್ನೋದು ಇನ್ನೂ ಬಗೆಹರಿದಿಲ್ಲ. ಮೊದಲ ಬಾರಿಗೆ  ಹಾಲಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಶಿವಮೊಗ್ಗ (ಮಾ.31): ಸಾಗರ ಕ್ಷೇತ್ರದಲ್ಲಿ ಹರತಾಳು  ಹಾಲಪ್ಪ  ಹಾಗೂ ಬೇಳೂರು ಗೋಪಾಲಕೃಷ್ಣ ನಡುವೆ ಪೈಪೋಟಿ ಏರ್ಪಟ್ಟಿದೆ. ಯಾರಿಗೆ ಟಿಕೆಟ್ ಸಿಗುತ್ತೆ ಅನ್ನೋದು ಇನ್ನೂ ಬಗೆಹರಿದಿಲ್ಲ. ಮೊದಲ ಬಾರಿಗೆ  ಹಾಲಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಸದ್ಯಕ್ಕೆ ಬಿಜೆಪಿಯಲ್ಲಿ ಇದ್ದೇನೆ.  ಇನ್ನು ಅಭ್ಯರ್ಥಿಗಳ  ಪಟ್ಟಿ ಬಿಡುಗಡೆ ಮಾಡಿಲ್ಲ.  ಒಂದು ವೇಳೆ ಸಾಗರ ಕ್ಷೇತ್ರದಿಂದ ಟಿಕೆಟ್ ಸಿಕ್ಕಿಲ್ಲ ಅಂದ್ರೆ  ನನ್ನ ಬೆಂಬಲಿಗರು ಮತ್ತು ಸ್ನೇಹಿತರೊಂದಿಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ.   ಮೂರನೇ ಸ್ಥಾನ ಪಡೆದವರಿಗೆಲ್ಲ ಟೆಕೆಟ್ ಸಿಗುತ್ತೆ.   ನಾನು ಎರಡನೇ ಸ್ಥಾನ ಪಡೆದವನು.  ನಂಗೆ ಟಿಕೆಟ್ ಇಲ್ಲ ಅಂದ್ರೆ ಹೇಗೆ?   ಯಡಿಯೂರಪ್ಪನವರೊಂದಿಗೆ ಒಮ್ಮೆ ಮಾತನಾಡುತ್ತೇನೆ. ಅವರು ಮಾತಿಗೆ ಸಿಕ್ಕಿಲ್ಲ.   ಬೇರೆ ಪಕ್ಷದಿಂದ ಫೋನ್ ಮೂಲಕ ಸಂಪರ್ಕಿಸಿದ್ದಾರೆ.   ಯಡಿಯೂರಪ್ಪನವರ ಯೋಚನೆ ಮಾಡಬೇಕು. ಯಡಿಯೂರಪ್ಪನವರ ಜೊತೆಗೆ ನಾವೆಲ್ಲಾ ಇದ್ದವರು.  ಇದೀಗ ರುದ್ರೇಗೌಡ,ನೆಹರು ಒಲೇಕರ್ , ಬೊಮ್ಮಾಯಿಗೆ ಟಿಕೆಟ್ ಇಲ್ಲ ಅಂತಿದ್ದಾರೆ.  ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟವರಿಗೆ ಟಿಕೆಟ್ ಕೊಟ್ಟರೆ ವಿರೋಧಿಸುತ್ತೇನೆ ಎಂದು ಹಾಲಪ್ಪ ಹೇಳಿದ್ದಾರೆ. 
 

loader