ತಮ್ಮದೇ ಪಕ್ಷದ ಮುಖಂಡನ ಕಿರುಕುಳ : ವಿಧಾನಸಭೆಯಲ್ಲೇ ಅತ್ತ ಬಿಜೆಪಿ ಶಾಸಕಿ

Harassed by cops on minister’s behest, BJP MLA cries in assembly
Highlights

ತಮ್ಮದೇ ಪಕ್ಷದ ಮುಖಂಡನಿಂದಲೇ ತಮಗೆ ಕಿರಕುಳವಾಗುತ್ತಿದೆ ಎಂದು ವಿಧಾನಸಭೆಯಲ್ಲೇ ಬಿಜೆಪಿ ಶಾಸಕಿಯೋರ್ವರು ಕಣ್ಣೀರು ಹಾಕಿದ್ದಾರೆ.  

ಭೋಪಾಲ್‌: ತಮ್ಮದೇ ಪಕ್ಷದ ಹಿರಿಯ ಮುಖಂಡನ ಅಣತಿ ಮೇರೆಗೆ ಜಿಲ್ಲಾ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಬಿಜೆಪಿಯ ಶಾಸಕಿಯೊಬ್ಬರು ಮಧ್ಯಪ್ರದೇಶದ ವಿಧಾನಸಭೆಯಲ್ಲೇ ಕಣ್ಣೀರು ಹಾಕಿದ ಘಟನೆ ನಡೆದಿದೆ.

ಮಂಗಳವಾರ ನಡೆದ ವಿಧಾನಸಭೆ ಕಲಾಪದ ಶೂನ್ಯ ಅವಧಿ ವೇಳೆ ಮಾತನಾಡಿದ ಬಿಜೆಪಿ ಶಾಸಕಿ ನೀಲಂ ಅಭಯ್‌ ಮಿಶ್ರಾ ಅವರು, ರೇವಾ ಜಿಲ್ಲೆಯ ಪೊಲೀಸರು ಸುಳ್ಳು ಪ್ರಕರಣದಲ್ಲಿ ನನ್ನ ಮತ್ತು ನನ್ನ ಕುಟುಂಬ ಸದಸ್ಯರನ್ನು ಸಿಲುಕಿಸಲು ಯತ್ನಿಸುತ್ತಿದ್ದಾರೆ. ಹೀಗಾಗಿ ನಮಗೆ ಭದ್ರತೆ ನೀಡಬೇಕು, ಎಂದು ಕೋರಿದರು. ಅಲ್ಲದೆ, ಬಿಜೆಪಿಯ ಪ್ರಭಾವಿ ನಾಯಕರೊಬ್ಬರ ಮಾತು ಕಟ್ಟಿಕೊಂಡು ರೇವಾ ಎಸ್‌ಪಿ ತಮ್ಮ ಕುಟುಂಬದ ವಿರುದ್ಧ ಪಕ್ಷಪಾತಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಗಳಗಳನೆ ಅತ್ತರು. ಅಲ್ಲದೆ, ಇದರಿಂದ ಮನಸ್ಸಿಗೆ ತುಂಬಾ ನೋವಾಗಿದ್ದು, ಮುಂದಿನ ಬಾರಿಯ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಹೇಳಿಕೊಂಡರು.

ಈ ವೇಳೆ ಬಿಜೆಪಿ ಶಾಸಕಿಯ ನೆರವಿಗೆ ಬಂದ ಪ್ರತಿಪಕ್ಷ ಕಾಂಗ್ರೆಸ್‌ ಶಾಸಕರು, ರಾಜ್ಯದಲ್ಲಿ ಆಡಳಿತಾರೂಢ ಶಾಸಕಿಯ ಕಥೆಯೇ ಇಷ್ಟುಅಸಹಾಯಕವಾದರೆ, ಇನ್ನು ಸಾಮಾನ್ಯ ಜನರ ಗತಿಯೇನು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

loader