ನ್ಯೂಯಾರ್ಕ್[ಜ.11]: 2019ರಲ್ಲಿ ನೋಡಲೇಬೇಕಾದ 52 ಪ್ರೇಕ್ಷಣೀಯ ಸ್ಥಳಗಳ ಪಟ್ಟಿಯನ್ನು ಅಮೆರಿಕದ ಪ್ರಸಿದ್ಧ ‘ನ್ಯೂಯಾರ್ಕ್ ಟೈಮ್ಸ್’ ಬಿಡುಗಡೆ ಮಾಡಿದ್ದು, ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಪ್ರಮುಖ ಪ್ರೇಕ್ಷಣೀಯ ತಾಣ ಹಂಪಿಗೆ 2ನೇ ಸ್ಥಾನ ನೀಡಲಾಗಿದೆ.

ಪಟ್ಟಿಯಲ್ಲಿರುವ ಭಾರತದ ಏಕೈಕ ಪ್ರವಾಸೀ ತಾಣ ಹಂಪಿ ಆಗಿದೆ. ಕೆರಿಬಿಯನ್ ದ್ವೀಪ ಸಮೂಹದಲ್ಲಿರುವ ಪೋರ್ಟೋ ರಿಕೋಗೆ ಮೊದಲ ಸ್ಥಾನ, ಕ್ಯಾಲಿಫೋರ್ನಿಯಾದ ಸಾಂತಾ ಬಾರ್ಬರಾಗೆ 3ನೇ ಸ್ಥಾನ ಲಭಿಸಿದೆ. ಇನ್ನುಳಿದಂತೆ ಪನಾಮಾ, ಮ್ಯೂನಿಕ್‌ಗಳು ನಂತರದ ಸ್ಥಾನದಲ್ಲಿವೆ. ಪಟ್ಟಿಯ ಸಂಪೂರ್ಣ ವಿವರ https://www.nytimes.com/ ನಲ್ಲಿ ಲಭ್ಯವಿದೆ.

ಹಂಪಿಯು 16ನೇ ಶತಮಾನದಲ್ಲಿ ಸ್ಥಾಪನೆಯಾದ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದೆ. ಕರ್ನಾಟಕದ ಈ ಸ್ಥಳವು ತನ್ನ ವಾಸ್ತುಶಿಲ್ಪದ ಪರಂಪರೆಯನ್ನು ಇಂದಿಗೂ ಉಳಿಸಿಕೊಂಡಿದೆ.