ನವದೆಹಲಿ[ಡಿ.21] ವೃತ್ತಿಯಲ್ಲಿನ ಸಾಫ್ಟವೇರ್ ಎಂಜಿನಿಯರ್ ಆಹಿರುವ ಹಮೀದ್ ಅನ್ಸಾರಿ ಪಾಕ್‌ನಲ್ಲಿ ತಮ್ಮ ಕರಾಳ ದಿನಗಳನ್ನು ಮುಗಿಸಿ ಸ್ವದೇಶಕ್ಕೆ ಹಿಂದಿರುಗಿದ್ದಾರೆ. ಪಾಕಿಸ್ತಾನದ ಯುವತಿಯೊಂದಿಗೆ ಅನ್ಸಾರಿಗೆ ಪ್ರೇಮಾಂಕುರ ಆಗಿತ್ತು. ಇದಕ್ಕೆ ವೇದಿಕೆಯಾಗಿದ್ದು ಫೇಸ್‌ಬುಕ್.

ಆಕೆಯನ್ನು ಹುಡುಕಿಕೊಂಡು ಪಾಕಿಸ್ತಾನಕ್ಕೆ ಹೋದ ಅನ್ಸಾರಿ ಅವರನ್ನು ಜೈಲಿಗೆ ಅಟ್ಟಲಾಗಿತ್ತು. ಮುಂಬೈನ ತಮ್ಮ ನಿವಾಸಕ್ಕೆ ಬಂದ ಅನಸಾರಿ ಮೊದಲು ಹೇಳಿದ ಮಾತೆಂದರೆ, ದಯವಿಟ್ಟು ಯಾರು ಸೋಶಿಯಲ್ ಮೀಡಿಯಾ ನಂಬಿಕೊಂಡು ಲವ್ ಮಾಡಬೇಡಿ. ನಿಮ್ಮ ಪೋಷಕರಿಂದ ಯಾವುದೇ ವಿಚಾರವನ್ನು ಮುಚ್ಚಿಡಬೇಡಿ ಎಂಬ ಸಲಹೆಯನ್ನು ನೀಡಿದ್ದಾರೆ.

2012ರಲ್ಲಿ ಪಾಕಿಸ್ತಾನಕ್ಕೆ ಅಪಘಾನಿಸ್ತಾನದ ಮೂಲಕ ತೆರಳಿದ್ದ ಅನ್ಸಾರಿ ಅವರನ್ನು ಬಂಧಿಸಲಾಗಿತ್ತು. ಗೂಢಚರ್ಯೆ ಮಾಡಲು ಪಾಕಿಸ್ತಾನಕ್ಕೆ ಅನ್ಸಾರಿ ಕಾಲಿಟ್ಟಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿತ್ತು.