ಈ ಪ್ರಕರಣದಲ್ಲಿ ಮಾನಸಿಕವಾಗಿ ನೊಂದ ನಾನು ಹೇಡಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರೆ ಹಾಲಪ್ಪ ಮಾಡಿದ್ದು ನಿಜ ಎಂದು ಜನ ನಂಬುತ್ತಿದ್ದರು. ನಾನು ಆರೋಪವನ್ನು ಎದುರಿಸಿ ನಿಂತೆ, ಸತ್ಯ ಹೊರಬರಲು ಸ್ವಲ್ಪ ತಡವಾಯಿತು'.  

ಶಿವಮೊಗ್ಗ(ಆ.17): ಒಂದು ಆತ್ಮಹತ್ಯೆ ಮಾಡಿಕೊಳ್ಳಬೇಕು ಇಲ್ಲವೆ ಈ ಆರೋಪವನ್ನು ಎದುರಿಸಿ ಸತ್ಯವನ್ನು ಜನತೆಗೆ ತಿಳಿಸಬೇಕು ಎಂದು ನಿರ್ಧರಿಸಿದ್ದೆ ಎಂದು ಬಿಜೆಪಿ ಮುಖಂಡ ಹರತಾಳು ಹಾಲಪ್ಪ ತಿಳಿಸಿದ್ದಾರೆ.

ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸಗಿದ ಆರೋಪದಿಂದ ನ್ಯಾಯಾಲಯದಿಂದ ಖುಲಾಸೆಗೊಂಡ ನಂತರ ಸುವರ್ಣ ನ್ಯೂಸ್'ನೊಂದಿಗೆ ಮಾತನಾಡಿದ ಅವರು, ಒಬ್ಬ ಹಾಲಿ ಮಂತ್ರಿಯ ಮೇಲೆ ದೊಡ್ಡ ಆರೋಪವನ್ನು ಉದ್ದೇಶಪೂರ್ವಕವಾಗಿಯೇ ಹೊರಿಸಲಾಗಿತ್ತು. ನನ್ನ ವಿರುದ್ಧ ವ್ಯವಸ್ಥಿತ ರಾಜಕೀಯ ಸಂಚು ರೂಪಿಸಲಾಗಿತ್ತು.

ದೂರುದಾರರೆ ಹಾಜರಾಗುತ್ತಿರಲಿಲ್ಲ

ಈ ಪ್ರಕರಣದಲ್ಲಿ ಮಾನಸಿಕವಾಗಿ ನೊಂದ ನಾನು ಹೇಡಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರೆ ಹಾಲಪ್ಪ ಮಾಡಿದ್ದು ನಿಜ ಎಂದು ಜನ ನಂಬುತ್ತಿದ್ದರು. ನಾನು ಆರೋಪವನ್ನು ಎದುರಿಸಿ ನಿಂತೆ, ಸತ್ಯ ಹೊರಬರಲು ಸ್ವಲ್ಪ ತಡವಾಯಿತು'.

ನಮ್ಮ ದೇಶದ ಇತಿಹಾಸದಲ್ಲಿ ದೂರು ಕೊಟ್ಟವರು ಮೊದಲು ಹಾಜರಾಗುತ್ತಾರೆ. ಆದರೆ ನನ್ನ ಪ್ರಕರಣದಲ್ಲಿ ದೂರು ಕೊಟ್ಟವರೆ ಹಾಜರಾಗುತ್ತಿರಲಿಲ್ಲ. ಆದ್ದರಿಂದ ತೀರ್ಪು ಇಷ್ಟು ತಡವಾಯಿತು. ಮುಂದಿನ ಚುನಾವಣೆಯ ಅವಧಿ ಬರುವವರೆಗೂ ಈ ಪ್ರಕರಣವನ್ನು ತೆಗೆದುಕೊಂಡು ಹೋಗಲು ನನ್ನ ವಿರುದ್ಧ ದೂರು ನೀಡಿದವರು ಷಡ್ಯಂತ್ರ ರೂಪಿಸಿದ್ದರು. ರಾತ್ರಿ ಮಲಗಿದ್ದವನಿಗೆ ಬೆಳಗ್ಗೆ ಎದ್ದ ತಕ್ಷಣ ಅತ್ಯಾಚಾರ ಎಂದರೆ ಏನಾಗಬೇಡ. ನನ್ನ ವಿರುದ್ಧದ ಹುನ್ನಾರದ ಪ್ರತಿ ಸತ್ಯವನ್ನು ಪತ್ತೆಹಚ್ಚಿತ್ತು ಸುವರ್ಣ ನ್ಯೂಸ್ ಅದಕ್ಕಾಗಿ ನಾನು ನಿಮ್ಮ ವಾಹಿನಿಯನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.

ಕುಟುಂಬ ರಾಜಕೀಯ ಎದುರಿಸಿ ಗೆದ್ದವನು ನಾನು

ನಾನು ಏಕಾಏಕಿ ರಾಜಕೀಯಕ್ಕೆ ಬಂದವನಲ್ಲ. ವಿದ್ಯಾರ್ಥಿ ಜೀವನದಿಂದಲೂ ರಾಜಕೀಯ ನಾಯಕನಾಗಿ ಗುರುತಿಸಿಕೊಂಡವನು. 1967ರಿಂದ 50 ವರ್ಷಗಳ ಕಾಲ ಒಂದೇ ಕುಟುಂಬದ ಹಿಡಿತದಲ್ಲಿದ್ದ ಕ್ಷೇತ್ರದ ವಿರುದ್ಧ ಸಿಡಿದೆದ್ದು ಶಾಸಕನಾದೆ. ನಮ್ಮ ನಾಯಕರಾದ ಯಡಿಯೂರಪ್ಪವನರು ನನ್ನನ್ನು ಮಂತ್ರಿಯನ್ನಾಗಿ ಮಾಡಿದರು. ಇದೊಂದು ಕೆಟ್ಟ ಕನಸೆಂದು ಮರೆತುಬಿಡುತ್ತೇನೆ' ಎಂದು ಇದೇ ಸಂದರ್ಭದಲ್ಲಿ ಹೇಳಿದರು.

7 ವರ್ಷಗಳ ವಿಚಾರಣೆ

ಸ್ನೇಹಿತನಪತ್ನಿಮೇಲೆಅತ್ಯಾಚಾರಎಸಗಿದಆರೋಪದಿಂದಬಿಜೆಪಿಮುಖಂಡಹರತಾಳುಹಾಲಪ್ಪಮುಕ್ತರಾಗಿದ್ದಾರೆ. ಪ್ರಕರಣದಲ್ಲಿಹಾಲಪ್ಪನಿರ್ದೋಷಿಎಂದುಶಿವಮೊಗ್ಗಜಿಲ್ಲಾನ್ಯಾಯಾಲಯತೀರ್ಪುನೀಡಿದೆ. 7 ವರ್ಷಗಳಸುದೀರ್ಘವಿಚಾರಣೆಬಳಿಕಶಿವಮೊಗ್ಗದಮುಖಂಡಆರೋಪಮುಕ್ತರಾಗಿದ್ದಾರೆ. ಶಿವಮೊಗ್ಗದ 2ನೇಸತ್ರಮತ್ತುಜಿಲ್ಲಾನ್ಯಾಯಾಧೀಶೆನ್ಯಾ| ರಮಾಅವರುತೀರ್ಪುನೀಡಿದ್ದಾರೆ.

ಏನಿದುಪ್ರಕರಣ..?
2009ನವೆಂಬರ್​ 26 ರಂದುಊಟಮಾಡಲುಆಗಮಿಸಿದ್ದಹರತಾಳುಹಾಲಪ್ಪರವರುತಮ್ಮಪತ್ನಿಯಮೇಲೆಅತ್ಯಾಚಾರವೆಸಗಿದ್ದಾಗಿವೆಂಕಟೇಶಮೂರ್ತಿಆರೋಪಿಸಿದ್ದರು. ಸಂಬಂಧವೆಂಕಟೇಶಮೂರ್ತಿಮತ್ತುಆತನಪತ್ನಿಚಂದ್ರಾವತಿ 2010 ಮೇ 3 ರಂದುಶಿವಮೊಗ್ಗದವಿನೋಬನಗರಪೊಲೀಸ್ಠಾಣೆಗೆದೂರುನೀಡಿದ್ದರು. ಆದ್ರೆಒಂದುದಿನಮುಂಚಿತವಾಗಿಯೇಅಂದ್ರೆ 2010 ಮೇ. 2 ರಂದೇಹಾಲಪ್ಪಸಚಿವಸ್ಥಾನಕ್ಕೆರಾಜೀನಾಮೆನೀಡಿದ್ದರು. 2010 ಮೇ 10 ರಂದುಹಾಲಪ್ಪಪೊಲೀಸರಿಗೆಶರಣಾಗಿದ್ದರು. ಕೆಲದಿನಗಳಬಳಿಕಷರತ್ತುಬದ್ಧಜಾಮೀನುಮಂಜೂರಾಗಿತ್ತು

90 ದಿನದೊಳಗೆಚಾರ್ಚ್ಶಿಟ್ಸಲ್ಲಿಸಬೇಕಾಗಿದ್ದಸಿಐಡಿಪೋಲಿಸರು 10 ತಿಂಗಳಾದರೂನ್ಯಾಯಾಲಯಕ್ಕೆಚಾರ್ಚ್​'ಶೀಟ್ಸಲ್ಲಿಸಿರಲಿಲ್ಲ. ಆಗಹಾಲಪ್ಪಪರವಕೀಲರುವಿಳಂಬದಕುರಿತುಹೈಕೊರ್ಟ್ಗಮನಸೆಳೆದಿದ್ದರು. ಆಗಹೈಕೋರ್ಟ್ಪ್ರಕರಣಕ್ಕೆಸಂಬಂಧಿಸಿದಂತೆ 2011 ಮಾ. 31ರೊಳಗೆಸಂಬಂಧಿಸಿದನ್ಯಾಯಾಲಯಕ್ಕೆತನಿಖಾವರದಿಯನ್ನುಸಲ್ಲಿಸುವಂತೆಸಿಐಡಿಗೆಸ್ಪಷ್ಟಆದೇಶನೀಡಿತ್ತು. ಆಗಸಿಐಡಿಪೊಲೀಸರುಮಾ 30 ರಂದುಶಿವಮೊಗ್ಗನಗರದಮೂರನೇಹೆಚ್ಚುವರಿಜೆಎಂಎಫ್ಸಿನ್ಯಾಯಾಲಯಕ್ಕೆಆರೋಪಪಟ್ಟಿಯನ್ನುಸಲ್ಲಿಸಿದ್ದರು. ಇದೀಗಸುದೀರ್ಘವಾದ-ಪ್ರತಿವಾದಆಲಿಸಿರುವನ್ಯಾಯಾಲಯಇಂದುತೀರ್ಪುಪ್ರಕಟಿಸಿದೆ.