ಶಿವಮೊಗ್ಗ :  ಬೇಳೂರು ಗೋಪಾಲಕೃಷ್ಣ ವಿರುದ್ಧ ಮಾಜಿ ಸಚಿವ ಹರತಾಳು ಹಾಲಪ್ಪ ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪ, ಈಶ್ವರಪ್ಪನವರ ವಿರುದ್ಧ ನೀಡಿದ್ದ ಹೇಳಿಕೆಗಳನ್ನು ಪ್ರದರ್ಶಿಸಿ ಹಾಲಪ್ಪ ವಾಗ್ದಾಳಿ ನಡೆಸಿದ್ದಾರೆ.

 ನನ್ನ ನಗುವನ್ನ ಕಿತ್ತುಕೊಂಡ ದುಷ್ಟರು ಸಾಗರದಲ್ಲೂ ಇರಬಾರದು, ಸೊರಬದಲ್ಲೂ ಇರಬಾರದು ಎಂದು ಗೋಪಾಲ ಕೃಷ್ಣ ವಿರುದ್ಧ ಕಿಡಿ ಕಾರಿದ್ದಾರೆ.

ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರೇ ಹೇಳಿದರೂ ಸಾಗರದಲ್ಲಿ ನಾನು ಬೇಳೂರು ಗೋಪಾಲಕೃಷ್ಣ ಗೆಲುವು ಪಡೆಯಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹರತಾಳು ಗ್ರಾಮದಲ್ಲಿ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದ ಹರತಾಳು ಹಾಲಪ್ಪ  ಹೇಳಿಕೆಯನ್ನು ನೀಡಿದ್ದಾರೆ.